ಸ್ಟಾರ್ ಬ್ಯಾಟ್ಸ್'ಮೆನ್'ಗಳು ವಿಫಲ: ಹೈದರಾಬಾದ್'ಗೆ ಸಾಧಾರಣ ಟಾರ್ಗೆಟ್ ನೀಡಿದ ಮುಂಬೈ

First Published 12, Apr 2018, 9:38 PM IST
MI Score 147 only
Highlights

2 ಪಂದ್ಯದಲ್ಲೂ ರೋಹಿತ್ ಶರ್ಮಾ ವಿಫಲರಾದರು. 10 ಎಸತಗಳನ್ನು ಎದುರಿಸಿ 1 ಸಿಕ್ಸ್'ರ್ ಹಾಗೂ 1 ಬೌಂಡರಿಯೊಂದಿಗೆ 11 ಬಾರಿಸಿ ಔಟಾದರು. 

ಹೈದರಾಬಾದ್(ಏ.12): ಸ್ಟಾರ್ ಬ್ಯಾಟ್ಸ್'ಮೆನ್'ಗಳಾದ ರೋಹಿತ್ ಶರ್ಮಾ, ಇಶಾನ್ ಕಿಶನ್,ಪಾಂಡ್ಯ ವಿಫಲವಾದ ಕಾರಣ ಕಳೆದ ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್'ನ 11ನೇ ಆವೃತ್ತಿಯ 2ನೇ ಲೀಗ್ ಪಂದ್ಯದಲ್ಲಿ ಹೈದರಾಬಾದ್ ತಂಡಕ್ಕೆ ಸಾಧಾರಣ 148 ಗುರಿ ನೀಡಿದೆ.

ಟಾಸ್ ಗೆದ್ದ ಹೈದರಾಬಾದ್ ತಂಡ ಮುಂಬೈ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತು. 2 ಪಂದ್ಯದಲ್ಲೂ ರೋಹಿತ್ ಶರ್ಮಾ ವಿಫಲರಾದರು. 10 ಎಸತಗಳನ್ನು ಎದುರಿಸಿ 1 ಸಿಕ್ಸ್'ರ್ ಹಾಗೂ 1 ಬೌಂಡರಿಯೊಂದಿಗೆ 11 ಬಾರಿಸಿ ಔಟಾದರು.  ಲೆವಿಸ್(29: 17 ಎಸೆತ , 2 ಸಿಕ್ಸ್'ರ್,3 ಬೌಂಡರಿ ) ಕೆಲ ಹೊತ್ತು ಬಿರುಸಿನ ಆಟವಾಡಿದರೂ ಕೌಲ್'ಗೆ ವಿಕೇಟ್ ಒಪ್ಪಿಸಿದರು. ವಿಕೇಟ್ ಕೀಪರ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆಲ್'ರೌಂಡರ್ ಪಾಂಡ್ಯ 15 ರನ್'ಗೆ ಔಟಾದರು. ಪೊಲ್ಲಾರ್ಡ್(28)  ಹಾಗೂ ಸೂರ್ಯಕುಮಾರ್ ಯಾದವ್ (28) ಕೆಲ ಹೊತ್ತು ಮಿಂಚು ಮೂಡಿಸಿದರೂ ನಿರೀಕ್ಷಿತ ರನ್'ಗೆ ಸಹಾಯ ಮಾಡಲಿಲ್ಲ. ಅಂತಿಮವಾಗಿ ಮುಂಬೈ ತಂಡ 20 ಓವರ್'ಗಳಲ್ಲಿ -- ಗಳಿಸಿತು.

ಹೈದರಾಬಾದ್ ಪರ  ಸ್ಟನ್'ಲೇಕೆ, ಸಂದೀಪ್ ಶರ್ಮಾ, ಕೌಲ್ ತಲಾ 2 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

ಸ್ಕೋರ್

ಮುಂಬೈ ಇಂಡಿಯನ್ಸ್ 20 ಓವರ್'ಗಳಲ್ಲಿ 147/8

(ಲೆವಿಸ್ 29, ಯಾದವ್ 28,ಶರ್ಮಾ 25/2, ಸ್ಟಾಂಕ್ಲೆ 42/2 )

ವಿವರ ಅಪೂರ್ಣ

loader