ಕೋಲ್ಕತ್ತಾ(ಮೇ.09): ವಿಕೇಟ್ ಕೀಪರ್ ಇಶಾನ್ ಕಿಶನ್ ಸ್ಫೋಟಕ ಆಟದ ಪರಿಣಾಮ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 211ರನ್'ಗಳ ಬೃಹತ್ ಗುರಿ ನೀಡಿದೆ.
ಟಾಸ್ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಮುಂಬೈ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಆರಂಭಿಕ ಆಟಗಾರರಾದ ಎಸ್.ಯಾದವ್ (36), ಲೆವಿಸ್ (18) ಔಟಾದರು. ನಾಯಕ ರೋಹಿತ್ ಶರ್ಮಾ(36), ವಿಕೇಟ್ ಕೀಪರ್ ಇಶಾನ್ ಕಿಶನ್ ಹಾಗೂ ಬೆನ್ ಕಟಿಂಗ್ ಸ್ಫೋಟಕ ಆಟದ ಪರಿಣಾಮ ಮುಂಬೈ ಇಂಡಿಯನ್ಸ್ ತಂಡ 20 ಓವರ್'ಗಳಲ್ಲಿ 210/6 ರನ್ ಪೇರಿಸಿದರು.
21 ಚಂಡುಗಳಲ್ಲಿ 62 ಬಾರಿಸಿದ ಕಿಶನ್ ಆಟದಲ್ಲಿ6 ಸಿಕ್ಸ್ ಹಾಗೂ 5 ಬೌಂಡರಿಗಳಿದ್ದವು. ಕಟ್ಟಿಂಗ್ ಕೂಡ 9 ಎಸೆತಗಳಲ್ಲಿ 3 ಸಿಕ್ಸ್' ಹಾಗೂ 1 ಬೌಂಡರಿ ಬಾರಿಸಿದರು. ಕೋಲ್ಕತ್ತಾ ಪರ ಪಿಯೂಶ್ ಚಾವ್ಲಾ 48/3 ವಿಕೇಟ್ ಪಡೆದರು.

ಸ್ಕೋರ್

ಮುಂಬೈ ಇಂಡಿಯನ್ಸ್  20 ಓವರ್'ಗಳಲ್ಲಿ 210/6
(ಕಿಶನ್ 62, ರೋಹಿತ್ 36, ಪಿಯೂಶ್ ಚಾವ್ಲಾ 48/3)

ಕೋಲ್ಕತ್ತಾ ವಿರುದ್ಧದ ಪಂದ್ಯ
(ವಿವರ ಅಪೂರ್ಣ)