Asianet Suvarna News Asianet Suvarna News

ವಿಂಬಲ್ಡನ್: ಫೈನಲ್'ಗೆ ಲಗ್ಗೆಯಿಟ್ಟ ರೋಜರ್ ಫೆಡರರ್

ಫೆಡರರ್ 11ನೇ ಬಾರಿ ವಿಂಬಲ್ಡ'ನ್ ಫೈನಲ್ ಪ್ರವೇಶಿಸಿದ್ದು, 7 ಬಾರಿ ಕಪ್ ತನ್ನದಾಗಿಸಿಕೊಂಡಿದ್ದಾರೆ. ಈ ಬಾರಿ ಅವರು ಮೊದಲ ಬಾರಿ ಫೈನಲ್ ಪ್ರವೇಶಿಸಿರುವ ಮೊನೊಕೊದ 6ನೇ ವಿಶ್ವ ಶ್ರೇಯಾಂಕದ ಮರಿನ್ ಸಿಲಿಕ್ ಅವರ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

Mens Singles Semi final Roger Federer Beats Tomas Berdych
  • Facebook
  • Twitter
  • Whatsapp

ಲಂಡನ್(ಜು.14): ವಿಶ್ವ ಶ್ರಯಾಂಕದ 5ನೇ ಶ್ರೇಯಾಂಕದ ಆಟಗಾರ ಸ್ವಿಜರ್ಲ್ಯಾಂಡ್ ದೇಶದ ರೋಜರ್ ಫೆಡರರ್  ಅವರು 2017ನೇ ವಿಂಬಲ್ಡ್'ನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್'ನ ಸೆಮಿಫೈನಲ್ ಪಂದ್ಯದಲ್ಲಿ ವಿಶ್ವದ 11ನೇ ಶ್ರೇಯಾಂಕದ ಚೀಜ್ ರಿಪಬ್ಲಿಕ್'ನ ತೋಮಸ್ ಬೆರ್ಡಿಚ್ ಅವರನ್ನು 7-6(7-4) 7-6(7-4) 6-4 ನೇರ ಸೆಟ್'ಗಳಿಂದ ಮಣಿಸಿ ಫೈನಲ್ ತಲುಪಿದ್ದಾರೆ.

35 ವಯಸ್ಸಿನ ಫೆಡರರ್ 11ನೇ ಬಾರಿ ವಿಂಬಲ್ಡ'ನ್ ಫೈನಲ್ ಪ್ರವೇಶಿಸಿದ್ದು, 7 ಬಾರಿ ಕಪ್ ತನ್ನದಾಗಿಸಿಕೊಂಡಿದ್ದಾರೆ. ಈ ಬಾರಿ ಅವರು ಮೊದಲ ಬಾರಿ ಫೈನಲ್ ಪ್ರವೇಶಿಸಿರುವ ಮೊನೊಕೊದ 6ನೇ ವಿಶ್ವ ಶ್ರೇಯಾಂಕದ ಮರಿನ್ ಸಿಲಿಕ್ ಅವರ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

ಮರಿನ್ ಸಿಲಿಚ್ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಅಮೆರಿಕದ ಸ್ಯಾಮ್ ಕ್ವೆರ್ರಿ ವಿರುದ್ಧ 6-2(6-8), 6-4, 7-6(7-3), 7-5 ಸೆಟ್'ಗಳಲ್ಲಿ ಗೆಲುವು ಸಾಧಿಸಿದ್ದರು. ಫೈನಲ್ ಪಂದ್ಯವು ಜುಲೈ 16ರಂದು ನಡೆಯಲಿದೆ.

Follow Us:
Download App:
  • android
  • ios