ಮಿಶ್ರ ಡಬಲ್ಸ್ ಟೂರ್ನಿಯಲ್ಲಿ ಪುರುಷರಿಬ್ಬರೇ ಒಂದು ಪಾಯಿಂಟ್'ಗಾಗಿ ಕಾದಾಡಿದ್ದು ಸಾಕಷ್ಟು ವೈರಲ್ ಆಗಿದೆ. ರೋಜರ್ ಫೆಡರರ್- ಜಾಕ್ ಸಾಕ್ ಇಬ್ಬರೇ ಕಾದಾಟ ನಡೆಸಿದ್ದಾರೆ. ಇವರಿಬ್ಬರ ಆಟ ನೋಡಿ ಸುಸ್ತಾದ ಮಹಿಳಾ ಆಟಗಾರ್ತಿಯರು ಕೊನೆಗೆ ಟೆನಿಸ್ ಕೋರ್ಟ್ ಆಚೆಹೋಗಿ ನಿಂತು ಪಂದ್ಯ ವೀಕ್ಷಿಸಿದರು. ಹೀಗಿತ್ತು ಆ ಕ್ಷಣ
'Men Will be Men' ಎಂಬ ಮಾತಿಗೆ ಮತ್ತೊಂದು ಉದಾಹರಣೆ ಸಿಕ್ಕಂತಾಗಿದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಹೂಪ್'ಮ್ಯಾನ್ ಕಪ್ ಟೂರ್ನಿಯಲ್ಲಿ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಹಾಗೂ ಬೆಲಿಂದಾ ಬೆನ್ಸಿಕ್ ಜೋಡಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಯುನೈಟೆಡ್ ಸ್ಟೇಟ್ಸ್'ನ ಜಾಕ್ ಸಾಕ್ ಹಾಗೂ ಕೋಕೋ ವಂದೆವೆಘೆ ವಿರುದ್ಧ ಜಯಭೇರಿ ಬಾರಿಸಿತ್ತು. ಆದರೆ ಆ ಪಂದ್ಯದ ಒಂದು ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಮಿಶ್ರ ಡಬಲ್ಸ್ ಟೂರ್ನಿಯಲ್ಲಿ ಪುರುಷರಿಬ್ಬರೇ ಒಂದು ಪಾಯಿಂಟ್'ಗಾಗಿ ಕಾದಾಡಿದ್ದು ಸಾಕಷ್ಟು ವೈರಲ್ ಆಗಿದೆ. ರೋಜರ್ ಫೆಡರರ್- ಜಾಕ್ ಸಾಕ್ ಇಬ್ಬರೇ ಕಾದಾಟ ನಡೆಸಿದ್ದಾರೆ. ಇವರಿಬ್ಬರ ಆಟ ನೋಡಿ ಸುಸ್ತಾದ ಮಹಿಳಾ ಆಟಗಾರ್ತಿಯರು ಕೊನೆಗೆ ಟೆನಿಸ್ ಕೋರ್ಟ್ ಆಚೆಹೋಗಿ ನಿಂತು ಪಂದ್ಯ ವೀಕ್ಷಿಸಿದರು. ಹೀಗಿತ್ತು ಆ ಕ್ಷಣ..
