ಕೊಹ್ಲಿ-ಅನುಷ್ಕಾ ಜೋಡಿಯ ಹೊಸ ಫ್ರೆಂಡ್ ಯಾರು?

First Published 11, Jun 2018, 4:27 PM IST
Meet Virat Kohli And Anushka Sharma's New Friend
Highlights

ವಿಶ್ರಾಂತಿಯಲ್ಲಿರುವ ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾಳ ಹೊಸ ಫ್ರೆಂಡ್ ಯಾರು ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ವಿರುಷ್ಕಾ ಜೋಡಿಯ ಹೊಸ ಫ್ರೆಂಡ್ ವಿವರ ಇಲ್ಲಿದೆ.

ಮುಂಬೈ(ಜೂನ್.11): ಟೀಮ್ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ಬಾಲಿವುಡ್ ಬ್ಯೂಟಿ ಅನುಷ್ಕಾ ಶರ್ಮಾ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಜೂನ್.14 ರಿಂದ ಆರಂಭಗೊಳ್ಳಲಿರುವ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಿಂದ ದೂರ ಉಳಿದಿರುವ ಕೊಹ್ಲಿ, ಪತ್ನಿ ಅನುಷ್ಕಾ ಜೊತೆ ಕಾಲ ಕಳೆಯುತ್ತಿದ್ದಾರೆ. ಬ್ಯೂಸಿ ಲೈಫ್‌ನಿಂದ ಅಲ್ಪ ರೆಸ್ಟ್ ಪಡೆದಿರುವ ವಿರುಷ್ಕಾ ಜೋಡಿಗೆ ಹೊಸ ಫ್ರೆಂಡ್ ಸಿಕ್ಕಿದ್ದಾರೆ.

ಕೊಹ್ಲಿ ಹಾಗೂ ಅನುಷ್ಕಾ ಹೊಸ ಫ್ರೆಂಡ್ ಬೇರೆ ಯಾರು ಅಲ್ಲ, ಮುದ್ದಿನ ನಾಯಿ ಮರಿ. ಕೊಹ್ಲಿ ಹಾಗೂ ಅನುಷ್ಕಾ ತಮ್ಮ ಮುದ್ದಿನ ನಾಯಿ ಮರಿ ಜೊತೆಗಿರೋ ಫೋಟೋವನ್ನ ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ವಿರುಷ್ಕ ಪೋಸ್ಟ್‌ಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕೌಂಟಿ ಕ್ರಿಕೆಟ್‌ಗಾಗಿ ತೆರಳಬೇಕಿದ್ದ ವಿರಾಟ್ ಕೊಹ್ಲಿ ಇಂಜುರಿ ಕಾರಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಸಿಕ್ಕಿರೋ ವಿಶ್ರಾಂತಿ ಸಮಯದಲ್ಲಿ ಪತ್ನಿ ಅನುಷ್ಕಾ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ.

loader