Wrestlers Protest: ಮಾಧ್ಯಮಗಳ ವಿರುದ್ಧ ಕುಸ್ತಿಪಟುಗಳ ಆಕ್ರೋಶ!
ಭೂಷಣ್‌ಗೆ ಮಾತಾಡಲು ವೇದಿಕೆ ನೀಡ್ಬೇಡಿ
ಮಾಧ್ಯಮಗಳ ಮೇಲೆ ಆಕ್ರೋಶ ಹೊರಹಾಕಿದ ಕುಸ್ತಿಪಟುಗಳು
ಕ್ರಿಮಿನಲ್ಗಳಲ್ಲದ ಅಥ್ಲೀಟ್ಗಳಿಗಿಂತ ಕ್ರಿಮಿನಲ್ ಹಿನ್ನೆಲೆಯ ಬ್ರಿಜ್‌ಗೆ ಹೆಚ್ಚಿನ ಬೆಂಬಲ ನೀಡುತ್ತಿವೆ
ನವದೆಹಲಿ(ಮೇ.01): ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧದ ಕುಸ್ತಿಪಟುಗಳ ಹೋರಾಟ ಮುಂದುವರಿದಿದ್ದು, ಬ್ರಿಜ್‌ರನ್ನು ಬೆಂಬಲಿಸುತ್ತಿದ್ದಾರೆ ಎಂದು ಮಾಧ್ಯಮಗಳನ್ನೇ ದೂಷಿಸಿದ್ದಾರೆ.
ಭಾನುವಾರ ಮಾಧ್ಯಮಗಳ ಜೊತೆ ಮತನಾಡಿದ ಭಜರಂಗ್ ಪೂನಿಯಾ, ‘ಮಾಧ್ಯಮಗಳು ಕ್ರಿಮಿನಲ್ಗಳಲ್ಲದ ಅಥ್ಲೀಟ್ಗಳಿಗಿಂತ ಕ್ರಿಮಿನಲ್ ಹಿನ್ನೆಲೆಯ ಬ್ರಿಜ್‌ಗೆ ಹೆಚ್ಚಿನ ಬೆಂಬಲ ನೀಡುತ್ತಿದೆ. ಅಥ್ಲೀಟ್ಗಳು ದೇಶಕ್ಕೆ ಪದಕ ತಂದುಕೊಟ್ಟಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಇಲ್ಲಿ ಸಂಸದರಾಗುವುದಕ್ಕಿಂತ ಕಷ್ಟ. ಒಲಿಂಪಿಕ್ಸ್ ಸಾಧಕರು ದೇಶದಲ್ಲಿ 40 ಮಂದಿಯಷ್ಟೇ ಇದ್ದಾರೆ. ಆದರೆ ಸಾವಿರಾರು ಸಂಸದರಿದ್ದಾರೆ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ವಿನೇಶ್ ಕೂಡಾ ಮಾತನಾಡಿದ್ದು, ‘ಮಾಧ್ಯಮಗಳು ಬ್ರಿಜ್‌ರನ್ನು ವಿಜೃಂಭಿಸುವುದನ್ನು ನಿಲ್ಲಿಸಿದರೆ ಅರ್ಧದಷ್ಟುಸಮಸ್ಯೆ ಕಡಿಮೆಯಾಗುತ್ತದೆ. ಬ್ರಿಜ್‌ರ ಅಹಂ ರಾವಣನಿಗಿಂತಲೂ ದೊಡ್ಡದು’ ಎಂದಿದ್ದಾರೆ.
ಇದೇ ವೇಳೆ ಭಜರಂಗ್ ಟ್ವೀಟರ್ ವಿರುದ್ಧವೂ ಕಿಡಿಕಾರಿದ್ದು, ಟ್ವೀಟರ್ #arrest_brijbhushan_now ಎಂಬ ಹ್ಯಾಶ್‌ಟ್ಯಾಗ್ ಅನ್ನೇ ತೆಗೆದು ಹಾಕಿದೆ. ಟ್ವೀಟ್‌ಗಳು ಟ್ರೆಂಡ್ ಆಗುವಂತೆ ಮಾಡಲೂ ಮಹಿಳಾ ಕುಸ್ತಿಪಟುಗಳು ಸುಪ್ರೀಂಗೆ ಹೋಗಬೇಕಾ? ಎಂದು ಪ್ರಶ್ನಿಸಿದ್ದಾರೆ. ಇನ್ನು, ಸುಪ್ರೀಂ ನಿರ್ದೇಶನದ ಬಳಿಕ ದೆಹಲಿ ಪೊಲೀಸರು ಬ್ರಿಜ್ ವಿರುದ್ಧ ದೂರು ನೀಡಿದ್ದ 7 ಕುಸ್ತಿಪಟುಗಳಿಗೆ ಭದ್ರತೆ ಒದಗಿಸಿದೆ.
ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ದಿನದಿಂದ ದಿನಕ್ಕೆ ರಾಜಕೀಯ ನಾಯಕರ ಬೆಂಬಲ ಹೆಚ್ಚುತ್ತಿದೆ.
ರಾಜಕೀಯ ಬೇಡ: ಭಜರಂಗ್
ರಾಜಕೀಯ ನಾಯಕರ ಭೇಟಿಯಿಂದಾಗಿ ಕುಸ್ತಿಪಟುಗಳು ಗೊಂದಲಕ್ಕೆ ಸಿಲುಕಿದ್ದು, ತಮ್ಮ ಹೋರಾಟವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳದಂತೆ ಮನವಿ ಮಾಡಿದ್ದಾರೆ. ಈ ಸಂಬಂಧ ಮಾತನಾಡಿರುವ ತಾರಾ ಕುಸ್ತಿಪಟು ಭಜರಂಗ್ ಪೂನಿಯಾ, ‘ಇದು ಭಾರತೀಯ ಕುಸ್ತಿಯನ್ನು ಉಳಿಸಲು ನಡೆಯುತ್ತಿರುವ ಹೋರಾಟ. ದಯವಿಟ್ಟು ಇದರಲ್ಲಿ ರಾಜಕೀಯ ಬೆರೆಸಬೇಡಿ’ ಎಂದಿದ್ದಾರೆ.
ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಪ್ರಿಯಾಂಕ ಗಾಂಧಿ, ಅರವಿಂದ್ ಕೇಜ್ರಿವಾಲ್
ಪ್ರತಿಭಟನೆಗೆ ಲಕ್ಷಾಂತರ ರುಪಾಯಿ ಹಣ ಸುರಿಯುತ್ತಿರುವ ಕುಸ್ತಿಪಟುಗಳು!
ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಕುಸ್ತಿಪಟುಗಳಿಂದ ಲಕ್ಷಾಂತರ ರು. ಖರ್ಚಾಗುತ್ತಿದ್ದು, ಅದನ್ನು ಅವರೇ ಭರಿಸುತ್ತಿದ್ದಾರೆ. ಈಗಾಗಲೇ ಹಾಸಿಗೆ, ಬೆಡ್‌ಶೀಟ್‌ಗಳು, ಫ್ಯಾನ್, ಸ್ಪೀಕರ್, ಮೈಕ್, ಮಿನಿ ಜನರೇಟರ್, ನೀರು, ಆಹಾರಕ್ಕೆ 5 ದಿನಗಳಲ್ಲಿ 5 ಲಕ್ಷಕ್ಕೂ ಹೆಚ್ಚಿನ ವೆಚ್ಚವಾಗಿದೆ.
‘ಆರಂಭದಲ್ಲಿ ನಾವು ಹಾಸಿಗೆ, ಬೆಡ್‌ಶೀಟ್, ಧ್ವನಿವರ್ಧಕ, ಮೈಕ್‌ಗಳನ್ನು ಬಾಡಿಗೆಗೆ ಪಡೆಯುತ್ತಿದ್ದೆವು. ಒಂದು ದಿನಕ್ಕೆ 27000 ರು. ಬಾಡಿಗೆ ಪಾವತಿಸುತ್ತಿದ್ದೆವು. ಬರೀ ಹಾಸಿಗೆ, ಬೆಡ್‌ಶೀಟ್‌ಗಳಿಗೇ ದಿನಕ್ಕೆ 12000 ರು. ಬಾಡಿಗೆ ಆಗುತ್ತಿತ್ತು. ಈಗ 50000 ರು. ನೀಡಿ 80 ಹಾಸಿಗೆ ಖರೀದಿಸಿದ್ದೇವೆ. ಸ್ಪೀಕರ್, ಮೈಕ್‌ಗಳನ್ನೂ ಖರೀದಿಸಿದ್ದೇವೆ. ಮಾರುಕಟ್ಟೆಯಲ್ಲಿ ವರ್ತಕರು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿ ಯಾವುದೇ ಲಾಭ ಇಟ್ಟುಕೊಳ್ಳದೆ ಮೈಕ್, ಸ್ಪೀಕರ್‌ಗಳನ್ನು ಕೊಟ್ಟಿದ್ದಾರೆ. ಫ್ಯಾನ್, ಜನರೇಟರ್ ಇನ್ನೂ ಬಾಡಿಗೆಗೆ ಪಡೆಯುತ್ತಿದ್ದು, ದಿನಕ್ಕೆ 10000 ರು. ಖರ್ಚಾಗುತ್ತಿ¨’ ಎಂದು ವಿನೇಶ್ ಫೋಗಾಟ್‌ರ ಪತಿ, ಕುಸ್ತಿಪಟು ಸೋಮ್‌ವೀರ್ ರಾಠಿ ಹೇಳಿದ್ದಾರೆ.
‘ಪ್ರತಿಭಟನೆಗೆ ಬರುವಾಗ 2 ಲಕ್ಷ ರು. ತಂದಿದ್ದೆವು. ಆದರೆ ಈಗಾಗಲೇ 5 ದಿನದಲ್ಲಿ 5-6 ಲಕ್ಷ ರು. ಖರ್ಚಾಗಿದೆ. ಕುಸ್ತಿಪಟುಗಳೇ ಹಣ ಹೊಂದಿಸುತ್ತಿದ್ದು, ಬೇರಾರಯರಿಂದಲೂ ಸಹಾಯ ಪಡೆಯುತ್ತಿಲ್ಲ. ಜೊತೆಗೆ ಹರ್ಯಾಣದ ಹಲವು ಅಖಾಡಗಳು ಯುವ ಕುಸ್ತಿಪಟುಗಳನ್ನು ನಮ್ಮೊಂದಿಗೆ ಪ್ರತಿಭಟಿಸಲು ಕಳುಹಿಸುತ್ತಿವೆ. ಆದರೆ ನಾವು ಹೆಚ್ಚು ಜನ ಬರಬೇಡಿ ಎಂದು ಮನವಿ ಮಾಡುತ್ತಿದ್ದೇವೆ’ ಎಂದು ಸೋಮ್‌ವೀರ್ ಹೇಳಿದ್ದಾರೆ.