ಮಹಿಳೆಯರ ಟಿ20 ವಿಶ್ವಕಪ್ ಫೆ.21ರಿಂದ ಮಾರ್ಚ್ 8ರ ತನಕ ನಡೆದರೆ, ಪುರುಷರ ವಿಶ್ವಕಪ್ ಅ.18ರಿಂದ ನ.15ರವರೆಗೂ ಜರುಗಲಿದೆ ಎಂದು ಐಸಿಸಿ ಮಂಗಳವಾರ ಪ್ರಕಟಿಸಿದೆ.
ದುಬೈ(ಜ.31): 2020ರ ಪುರುಷ ಹಾಗೂ ಮಹಿಳಾ ಟಿ20 ವಿಶ್ವಕಪ್'ಗಳಿಗೆ ಆಸ್ಟ್ರೇಲಿಯಾ ಆತಿಥ್ಯ ವಹಿಸಲಿದ್ದು, ಎರಡರ ಫೈನಲ್ ಪಂದ್ಯಗಳು ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.
ಮಹಿಳೆಯರ ಟಿ20 ವಿಶ್ವಕಪ್ ಫೆ.21ರಿಂದ ಮಾರ್ಚ್ 8ರ ತನಕ ನಡೆದರೆ, ಪುರುಷರ ವಿಶ್ವಕಪ್ ಅ.18ರಿಂದ ನ.15ರವರೆಗೂ ಜರುಗಲಿದೆ ಎಂದು ಐಸಿಸಿ ಮಂಗಳವಾರ ಪ್ರಕಟಿಸಿದೆ. ಅಡಿಲೇಡ್, ಬ್ರಿಸ್ಬೇನ್, ಕ್ಯಾನ್'ಬೆರಾ, ಹೊಬಾರ್ಟ್, ಮೆಲ್ಬರ್ನ್, ಪರ್ತ್, ಸಿಡ್ನಿ ಹಾಗೂ ಗೀಲೊಂಗ್ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.
ವಿಶ್ವದ 10 ಮಹಿಳಾ ತಂಡಗಳು ಹಾಗೂ 16 ಪುರುಷ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.
