ಹಗಲು ಬೆಳಕಿನ ಪಂದ್ಯವಾಗಿರುವ ಆ ಪಂದ್ಯದ 37,406 ಟಿಕೆಟ್‌'ಗಳನ್ನು ಮಾರಾಟಕ್ಕಿಡಲಾಗಿತ್ತು. ಮಿತಿಮೀರಿದ ಜನಸ್ಪಂದನೆ ಬಂದ ಹಿನ್ನೆಲೆಯಲ್ಲಿ ಎಲ್ಲಾ ಟಿಕೆಟ್‌'ಗಳೂ ಸರಾಗವಾಗಿ ಮಾರಾಟವಾಗಿವೆ ಎಂದು ಎಂಸಿಎ ಹೇಳಿದೆ.
ಮುಂಬೈ(ಡಿ.28): ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಮುಂದಿನ ತಿಂಗಳ 15ರಂದು ನಡೆಯಲಿರುವ ಭಾರತ, ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ಎಲ್ಲಾ ಟಿಕೆಟ್ಗಳೂ ಕೇವಲ 12 ದಿನಗಳಲ್ಲೇ ಸಂಪೂರ್ಣವಾಗಿ ಮಾರಾಟವಾಗಿವೆ ಎಂದು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಂಸಿಎ) ತಿಳಿಸಿದೆ.
ಹಗಲು ಬೆಳಕಿನ ಪಂದ್ಯವಾಗಿರುವ ಆ ಪಂದ್ಯದ 37,406 ಟಿಕೆಟ್'ಗಳನ್ನು ಮಾರಾಟಕ್ಕಿಡಲಾಗಿತ್ತು. ಮಿತಿಮೀರಿದ ಜನಸ್ಪಂದನೆ ಬಂದ ಹಿನ್ನೆಲೆಯಲ್ಲಿ ಎಲ್ಲಾ ಟಿಕೆಟ್'ಗಳೂ ಸರಾಗವಾಗಿ ಮಾರಾಟವಾಗಿವೆ ಎಂದು ಎಂಸಿಎ ಹೇಳಿದೆ.
ಅಂದಹಾಗೆ, ಈ ಕ್ರೀಡಾಂಗಣದಲ್ಲಿ ಆಯೋಜನೆಯಾಗುತ್ತಿರುವ 2ನೇ ಅಂತಾರಾಷ್ಟ್ರೀಯ ಪಂದ್ಯ ಇದಾಗಿದೆ.
ಈ ಹಿಂದೆ, 2013ರ ಅ.13ರಂದು ಭಾರತ, ಆಸ್ಟ್ರೇಲಿಯಾ ನಡುವಿನ ಏಕದಿನ ಪಂದ್ಯ ನಡೆದಿತ್ತು.
