ಕರ್ನಾಟಕ ಸ್ಫೋಟಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕರ್ನಾಟಕ ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಪುತ್ರಿ ಆಶಿತಾ ಸೂದ್‌ರನ್ನ ಮಯಾಂಕ್ ವರಿಸಿದ್ದಾರೆ.
ಬೆಂಗಳೂರು(ಜೂನ್.4): ಕರ್ನಾಟಕ ಹಾಗೂ ಕಿಂಗ್ಸ್ ಇಲೆವೆನ್ ತಂಡದ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಆಶಿತಾ ಸೂದ್‌ರನ್ನ ವರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಕ್ರಿಕೆಟಿಗ ಕೆಎಲ್ ರಾಹುಲ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.

ಕರ್ನಾಟಕದ ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಪುತ್ರಿ ಆಶಿತಾ ಸೂದ್ ಜೊತೆ ಫೆಬ್ರವರಿಯಲ್ಲಿ ಮಯಾಂಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮಯಾಂಕ್ ಅಗರ್ವಾಲ್ ಹಾಗೂ ಆಶಿತಾ ಸೂದ್ ಕುಟುಂಬಸ್ಥರು ಫ್ಯಾಮಿಲಿ ಫ್ರೆಂಡ್ಸ್ ಆಗಿದ್ದಾರೆ. ಹೀಗಾಗಿ ಇವರಿಬ್ಬರ ಪರಿಚಯ ಪ್ರೀತಿಯಾಗಿ ಇದೀಗ ಮದುವೆಯ ಅರ್ಥ ಪಡೆದಿದೆ.
ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ ಮಯಾಂಕ್ ಅಗರ್ವಾಲ್, ಗೆಳತಿ ಆಶಿತಾ ಸೂದ್‌ಗೆ ಪ್ರೇಮ ನಿವೇದನೆ ಮಾಡಿದ್ದರು. ಲಂಡನ್‌ನ ಥೇಮ್ಸ್ ನದಿ ತಪ್ಪಲಿನ ಲಂಡನ್ ಐ ಟವರ್‌ನಲ್ಲಿ ಮಯಾಂಕ್ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಇದನ್ನ ಮಯಾಂಕ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.
ದೇಸಿ ಟೂರ್ನಿಯಲ್ಲಿ ಅಬ್ಬರಿಸಿದ ಮಯಾಂಕ್ ಅಗರ್ವಾಲ್ ಬರೋಬ್ಬರಿ 2000 ರನ್ ಸಿಡಿಸಿದ್ದರು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಮಯಾಂಕ್ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದರು. ಕಿಂಗ್ಸ್ ಇಲೆವಲೆನ್ ಪರ ಕಣಕ್ಕಿಳಿದಿದ್ದ ಮಯಾಂಕ್ 11 ಪಂದ್ಯದಿಂದ 120 ರನ್ ಗಳಿಸಿದ್ದರು.
