ಬೆಂಗಳೂರಿನ ಕ್ರೀಡಾಂಗಣದಲ್ಲಿ ಸಬ್-ಏರ್ ವ್ಯವಸ್ಥೆ ಇದ್ದರೂ ಸಹ ಮಳೆ ನಿಲ್ಲದ ಕಾರಣ ಮೈದಾನ ಸಿಬ್ಬಂದಿ ಯಾವುದೇ ಸಾಹಸ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಪಂದ್ಯ ರದ್ದಾದ ಕಾರಣ 2 ತಂಡಗಳಿಗೂ ಒಂದೊಂದು ಅಂಕ ನೀಡಲಾಗಿದೆ. 7 ಪಂದ್ಯಗಳಲ್ಲಿ 5ರಲ್ಲಿ ಸೋತು ಕೇವಲ 2 ಪಂದ್ಯ ಮಾತ್ರ ಗೆದ್ದಿರುವ ಆರ್‌ಸಿಬಿಗೆ ಈ ಪಂದ್ಯ ಭಾರೀ ಮಹತ್ವದಾಗಿತ್ತು. ಕಳೆದ ವರ್ಷವೂ ಇದೇ ಸ್ಥಿತಿಯಲ್ಲಿದ್ದ ತಂಡ, ಕೊನೆ 7 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿ ಪ್ಲೇ-ಆಫ್ ಸ್ಥಾನ ಗಿಟ್ಟಿಸಿಕೊಂಡಿತ್ತು.

ಬೆಂಗಳೂರು(ಏ.25): ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಸನ್‌ರೈಸರ್ಸ್‌ ನಡುವಿನ ಮಂಗಳವಾರದ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು. ರಾತ್ರಿ 8ಕ್ಕೆ ಆರಂಭವಾಗಬೇಕಿದ್ದ ಪಂದ್ಯ 10 ಗಂಟೆಯಾದರೂ ಆರಂಭವಾಗಲಿಲ್ಲ. ಇದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಭಾರೀ ನಿರಾಸೆ ಮೂಡಿಸಿತು.

ಬೆಂಗಳೂರಿನ ಕ್ರೀಡಾಂಗಣದಲ್ಲಿ ಸಬ್-ಏರ್ ವ್ಯವಸ್ಥೆ ಇದ್ದರೂ ಸಹ ಮಳೆ ನಿಲ್ಲದ ಕಾರಣ ಮೈದಾನ ಸಿಬ್ಬಂದಿ ಯಾವುದೇ ಸಾಹಸ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಪಂದ್ಯ ರದ್ದಾದ ಕಾರಣ 2 ತಂಡಗಳಿಗೂ ಒಂದೊಂದು ಅಂಕ ನೀಡಲಾಗಿದೆ. 7 ಪಂದ್ಯಗಳಲ್ಲಿ 5ರಲ್ಲಿ ಸೋತು ಕೇವಲ 2 ಪಂದ್ಯ ಮಾತ್ರ ಗೆದ್ದಿರುವ ಆರ್‌ಸಿಬಿಗೆ ಈ ಪಂದ್ಯ ಭಾರೀ ಮಹತ್ವದಾಗಿತ್ತು. ಕಳೆದ ವರ್ಷವೂ ಇದೇ ಸ್ಥಿತಿಯಲ್ಲಿದ್ದ ತಂಡ, ಕೊನೆ 7 ಪಂದ್ಯಗಳಲ್ಲಿ 6ರಲ್ಲಿ ಜಯ ಸಾಧಿಸಿ ಪ್ಲೇ-ಆಫ್ ಸ್ಥಾನ ಗಿಟ್ಟಿಸಿಕೊಂಡಿತ್ತು.

ಈ ವರ್ಷವೂ ಅದೇ ರೀತಿ ಪುಟಿದೇಳಲು ತಂಡ ಎದುರು ನೋಡುತ್ತಿದೆ. ಮತ್ತೊಂದೆಡೆ ಹಾಲಿ ಚಾಂಪಿಯನ್ ಸನ್‌ರೈಸರ್ಸ್‌ ಹೈದರಾಬಾದ್ ಆಡಿರುವ 7 ಪಂದ್ಯಗಳಲಿ 4ರಲ್ಲಿ ಗೆಲುವು ಸಾಧಿಸಿ, ಮುಂದಿನ ಹಂತ ಪ್ರವೇಶಿಸುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿಕೊಂಡಿದೆ. ವಿಶೇಷ ಅಂದರೆ 2012ರ ಏಪ್ರಿಲ್ 24ರಂದು ಬೆಂಗಳೂರಲ್ಲಿ, ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದಾಗಿತ್ತು.

ಪಂದ್ಯ ರದ್ದು

ಎರಡೂ ತಂಡಗಳಿಗೂ ತಲಾ ಒಂದೊಂದು ಅಂಕ