ಭೂಪತಿಯಿಂದ ಸಾಕಷ್ಟು ಕಲಿತಿದ್ದೇನೆ: ಪಿಯರ್ಸ್
‘ಮಹೇಶ್'ರೊಂದಿಗೆ ಆಡುವುದು ನನ್ನ ಕನಸಾಗಿತ್ತು. ಯಾಕೆಂದರೆ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಅವರು ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದರು. ಅವರೊಂದಿಗೆ ಆಡುವುದು ಬಹಳ ಆನಂದದಾಯಕವಾಗಿತ್ತು. ಸಾಕಷ್ಟು ಕಲಿಯಲು ಅವಕಾಶ ದೊರೆಯಿತು’ ಎಂದು ಹೇಳಿದರು.
ಬೆಂಗಳೂರು[ಮೇ.25]: ಬೆಂಗಳೂರು 1೦ಕೆ ಮ್ಯಾರಥಾನ್ ಓಟದ ರಾಯಭಾರಿಯಾಗಿ ಆಗಮಿಸಿರುವ ಫ್ರಾನ್ಸ್‌ನ ಮಾಜಿ ಟೆನಿಸ್ ಆಟಗಾರ್ತಿ ಮೇರಿ ಪಿಯರ್ಸ್, ತಮ್ಮೊಂದಿಗೆ ಅನೇಕ ಟೂರ್ನಿಗಳಲ್ಲಿ ಒಟ್ಟಿಗೆ ಆಡಿದ ಭಾರತದ ದಿಗ್ಗಜ ಟೆನಿಸಗ ಮಹೇಶ್ ಭೂಪತಿಯನ್ನು ಕೊಂಡಾಡಿದ್ದಾರೆ.
ಗುರುವಾರ ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಯರ್ಸ್, ತಮ್ಮ ವೃತ್ತಿಪರ ದಿನಗಳನ್ನು ನೆನೆಪಿಸಿಕೊಂಡರು. ‘ಮಹೇಶ್'ರೊಂದಿಗೆ ಆಡುವುದು ನನ್ನ ಕನಸಾಗಿತ್ತು. ಯಾಕೆಂದರೆ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಅವರು ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದರು. ಅವರೊಂದಿಗೆ ಆಡುವುದು ಬಹಳ ಆನಂದದಾಯಕವಾಗಿತ್ತು. ಸಾಕಷ್ಟು ಕಲಿಯಲು ಅವಕಾಶ ದೊರೆಯಿತು’ ಎಂದು ಹೇಳಿದರು.
ಮಾಜಿ ಫ್ರೆಂಚ್ ಓಪನ್ ಚಾಂಪಿಯನ್ ಮೇರಿ ಪಿಯರ್ಸ್ 2006ರ ಗಾಯದ ಸಮಸ್ಯೆಗೆ ತುತ್ತಾಗಿ ಟೆನಿಸ್’ನಿಂದ ದೂರ ಸರಿದ ಅವರು ಆಧ್ಯಾತ್ಮಿಕ ಹಾದಿ ಹಿಡಿದಿದ್ದರು. ಇದೇವೇಳೆ ಪತ್ರಿಕಾಗೋಷ್ಠಿಯಲ್ಲಿ ರೋಜರ್ ಫೆಡರರ್, ಸೆರೆನಾ ವಿಲಿಯಮ್ಸ್ ಕುರಿತಂತೆಯೂ ತಮ್ಮ ಅನುಭವವನ್ನು ಹಂಚಿಕೊಂಡರು.