ಸದ್ಯ ಮುಂಬರುವ ಏಷ್ಯಾನ್ ಹಾಗೂ ಕಾಮನ್'ವೆಲ್ತ್ ಗೇಮ್ಸ್ ಬಗ್ಗೆ ಗಮನ ಹರಿಸುತ್ತಿದ್ದು, ಪದಕ ಗೆಲ್ಲುವ ನನ್ನ ಹಸಿವು ಇನ್ನು ಬಲವಾಗುತ್ತಿದ್ದೆ ಎಂದು ಮೇರಿ ಕೋಮ್ ಹೇಳಿದ್ದಾರೆ.
ನವದೆಹಲಿ(ಫೆ.12): ಏಕಕಾಲದಲ್ಲಿ ಕ್ರಿಯಾಶೀಲ ಬಾಕ್ಸರ್ ಮತ್ತು ಸಂಸದೆಯಾಗಿ ಕಾರ್ಯನಿರ್ವಹಿಸುವುದು ನಗುವ ವಿಷಯವಲ್ಲ ಎಂದು ಭಾರತದ ಬಾಕ್ಸಿಂಗ್ ದಂತಕಥೆ ಮೇರಿ ಕೊಂ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಮೂಲವೊಂದಕ್ಕೆ ಸಂದರ್ಶನ ನೀಡಿದ ಐದು ಬಾರಿಯ ವಿಶ್ವಚಾಂಪಿಯನ್, ಬಾಕ್ಸಿಂಗ್ ಪ್ರಾಕ್ಟೀಸ್ ಜೊತೆ ಸಂಸತ್ತಿನಲ್ಲಿ ಬಜೆಟ್ ಮಂಡನೆ ವೇಳೆ ಹಾಜರಾಗಲು ಪಟ್ಟ ಪಾಡನ್ನು ವಿವರಿಸಿದ್ದಾರೆ.
ನಾನು ಹದಿನೈದು ದಿನಗಳಿಂದ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸುತ್ತಿದ್ದೇನೆ. ಇದೇ ವೇಳೇ ಜ.31ರಿಂದ ಬಜೆಟ್ ಅಧಿವೇಶನ ಪ್ರಾರಂಭವಾಯಿತು. ಬೆಳಗ್ಗೆ 7 ಗಂಟೆಗೆ ಇಂದಿರಾ ಗಾಂಧಿ ಕ್ರೀಡಾಂಗಣಕ್ಕೆ ಹೋಗುತ್ತಿದ್ದ ನಾನು ಅವಸರವಸರವಾಗಿ ಹಿಂದುರುಗಿ ಸಂಸತ್ತಿಗೆ ತೆರಳುತ್ತದ್ದೆ. ಯಾವತ್ತೂ ಗೈರುಹಾಜರಾಗಿಲ್ಲ ಎಂದಿದ್ದಾರೆ.
ಸದ್ಯ ಮುಂಬರುವ ಏಷ್ಯಾನ್ ಹಾಗೂ ಕಾಮನ್'ವೆಲ್ತ್ ಗೇಮ್ಸ್ ಬಗ್ಗೆ ಗಮನ ಹರಿಸುತ್ತಿದ್ದು, ಪದಕ ಗೆಲ್ಲುವ ನನ್ನ ಹಸಿವು ಇನ್ನು ಬಲವಾಗುತ್ತಿದ್ದೆ ಎಂದು ಮೇರಿ ಕೋಮ್ ಹೇಳಿದ್ದಾರೆ.