ಮಹಿಳೆಯರ 48 ಕೆಜಿ ವಿಭಾಗದ ಕ್ವಾರ್ಟರ್‌ನಲ್ಲಿ ರೊಮೆನಿಯಾದ ಸ್ಟೆಲುಟಾರನ್ನು ಮಣಿಸುವ ಮೂಲಕ ಮೇರಿಕೋಮ್ ಅಂತಿಮ 4ರ ಘಟ್ಟಕ್ಕೇರಿದರೆ, 60 ಕೆಜಿ ವಿಭಾಗದಲ್ಲಿ ಚೀನಾದ ಕಿ ಯಾವೆನ್‌'ರನ್ನು ಮಣಿಸಿ ಸರಿತಾದೇವಿ ಸೆಮೀಸ್‌ಗೇರಿದರು.

ಸೋಫಿಯಾ (ಬಲ್ಗೇರಿಯಾ): ಭಾರತದ ಮೇರಿ ಕೋಮ್, ಸರಿತಾ ದೇವಿ ಸೇರಿದಂತೆ ನಾಲ್ವರು ಬಾಕ್ಸರ್‌'ಗಳು ಇಲ್ಲಿ ನಡೆಯುತ್ತಿರುವ 69ನೇ ಸ್ಟಾರಂಡ್ಜಾ ಸ್ಮಾರಣಾರ್ಥ ಬಾಕ್ಸಿಂಗ್ ಪಂದ್ಯಾವಳಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮಹಿಳೆಯರ 48 ಕೆಜಿ ವಿಭಾಗದ ಕ್ವಾರ್ಟರ್‌ನಲ್ಲಿ ರೊಮೆನಿಯಾದ ಸ್ಟೆಲುಟಾರನ್ನು ಮಣಿಸುವ ಮೂಲಕ ಮೇರಿಕೋಮ್ ಅಂತಿಮ 4ರ ಘಟ್ಟಕ್ಕೇರಿದರೆ, 60 ಕೆಜಿ ವಿಭಾಗದಲ್ಲಿ ಚೀನಾದ ಕಿ ಯಾವೆನ್‌'ರನ್ನು ಮಣಿಸಿ ಸರಿತಾದೇವಿ ಸೆಮೀಸ್‌ಗೇರಿದರು.

ಪುರುಷರ ವಿಭಾಗದಲ್ಲಿ ಅಮಿತ್ ಪಂಗಲ್ (49 ಕೆಜಿ), ಮೊಹಮ್ಮದ್ ಹುಸಮುದ್ದೀನ್ (56 ಕೆಜಿ) ಉಪಾಂತ್ಯ ಪ್ರವೇಶಿಸಿದರು.