2010ರಲ್ಲಿ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದ ಮೇರಿ, ಇದೀಗ ತಮ್ಮ ನೆಚ್ಚಿನ 48 ಕೆಜಿ ವಿಭಾಗಕ್ಕೆ ವಾಪಸಾಗಿದ್ದಾರೆ.

ನವದೆಹಲಿ(ಅ.03): ಇದೇ ನವೆಂಬರ್ 2ರಿಂದ 11ರವರೆಗೂ ವಿಯೆಟ್ನಾಂನ ಹೊ ಚೀ ಮಿನ್‌'ನಲ್ಲಿ ನಡೆಯಲಿರುವ ಏಷ್ಯಾ ಮಹಿಳಾ ಬಾಕ್ಸಿಂಗ್ ಚಾಂಪಿಯನ್'ಶಿಪ್‌'ಗೆ 10 ಸದಸ್ಯರ ಭಾರತ ತಂಡ ಪ್ರಕಟಗೊಂಡಿದೆ. ತಂಡದಲ್ಲಿ ತಾರಾ ಬಾಕ್ಸರ್‌'ಗಳಾದ ಮೇರಿ ಕೋಮ್ ಮತ್ತು ಸರಿತಾ ದೇವಿಗೆ ಸ್ಥಾನ ನೀಡಲಾಗಿದೆ.

ಈ ಚಾಂಪಿಯನ್‌'ಶಿಪ್'ಗಾಗಿ 3 ದಿನಗಳ ಕಾಲ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. 6 ಪಂದ್ಯಗಳನ್ನು ಆಡಿದ ಮೇರಿ 6ರಲ್ಲೂ ಗೆಲುವು ಸಾಧಿಸಿದರು. ವಿಶ್ವ ಚಾಂಪಿಯನ್'ಶಿಪ್‌'ನ ಬೆಳ್ಳಿ ಪದಕ ವಿಜೇತೆ ಸರ್ಜುಬಾಲ ದೇವಿ ಎದುರು ಮೇರಿ ಸೆಣಸಿದ್ದರು. 2010ರಲ್ಲಿ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದ ಮೇರಿ, ಇದೀಗ ತಮ್ಮ ನೆಚ್ಚಿನ 48 ಕೆಜಿ ವಿಭಾಗಕ್ಕೆ ವಾಪಸಾಗಿದ್ದಾರೆ.

ಇನ್ನು ವೃತ್ತಿಪರ ಬಾಕ್ಸಿಂಗ್‌'ನತ್ತ ಮುಖ ಮಾಡಿದ್ದ ಸರಿತಾ, ಅಮೆಚೂರ್ ಬಾಕ್ಸಿಂಗ್‌'ಗೆ ಹಿಂದಿರುಗಿದ್ದಾರೆ.