1994ರಲ್ಲಿ ಟೆನಿಸ್‌'ಗೆ ಕಾಲಿಟ್ಟ ಹಿಂಗಿಸ್, 5 ಸಿಂಗಲ್ಸ್, 13 ಮಹಿಳಾ ಡಬಲ್ಸ್ ಮತ್ತು 7 ಮಿಶ್ರ ಡಬಲ್ಸ್ ಸೇರಿದಂತೆ ಒಟ್ಟು 25 ಗ್ರ್ಯಾನ್ ಸ್ಲಾಮ್‌'ಗಳನ್ನು ಗೆದ್ದಿದ್ದಾರೆ.

ಸಿಂಗಾಪುರ(ಅ.28): ವಿಶ್ವದ ನಂ.1 ಡಬಲ್ಸ್ ಆಟಗಾರ್ತಿ ಸ್ವಿಸ್‌'ನ ಮಾರ್ಟಿನಾ ಹಿಂಗಿಸ್ ಈ ವಾರ ನಡೆಯಲಿರುವ ಡಬ್ಲ್ಯೂಟಿಎ ಫೈನಲ್ಸ್'ನಲ್ಲಿ ಆಡುವ ಮೂಲಕ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರೆ.

ಈ ಹಿಂದೆ 2003 ಹಾಗೂ 2007ರಲ್ಲಿ ನಿವೃತ್ತಿಯಾಗಿದ್ದ ಹಿಂಗಿಸ್, ಇದೀಗ 3ನೇ ಬಾರಿ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಸತತ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಹಿಂಗಿಸ್ 2003ರಲ್ಲಿ ಮೊದಲ ಬಾರಿ ನಿವೃತ್ತಿ ಘೋಷಿಸಿದ್ದರು. ಆದರೆ, 2006ರಲ್ಲಿ ತಮ್ಮ ನಿರ್ಧಾರದಿಂದ

ಯು ಟರ್ನ್ ತೆಗೆದುಕೊಂಡ ಹಿಂಗಿಸ್ ಭರ್ಜರಿ ಪುನರಾಗಮನ ಮಾಡಿದ್ದರು. ಆದರೆ, ಇದಾದ ಬಳಿಕ ಉದ್ದೀಪನಾ ಮದ್ದು ಪರೀಕ್ಷೆಯಲ್ಲಿ ಸಿಕ್ಕಿ ಬಿದ್ದ ಕಾರಣ ಹಿಂಗಿಸ್, 2 ವರ್ಷ ನಿಷೇಧಕ್ಕೆ ಒಳಗಾಗಿದ್ದರು.

ಮತ್ತೆ 2013ರಲ್ಲಿ ವೃತ್ತಿಜೀವನ ಆರಂಭಿಸಿದ್ದರು. 1994ರಲ್ಲಿ ಟೆನಿಸ್‌'ಗೆ ಕಾಲಿಟ್ಟ ಹಿಂಗಿಸ್, 5 ಸಿಂಗಲ್ಸ್, 13 ಮಹಿಳಾ ಡಬಲ್ಸ್ ಮತ್ತು 7 ಮಿಶ್ರ ಡಬಲ್ಸ್ ಸೇರಿದಂತೆ ಒಟ್ಟು 25 ಗ್ರ್ಯಾನ್ ಸ್ಲಾಮ್‌'ಗಳನ್ನು ಗೆದ್ದಿದ್ದಾರೆ.