Asianet Suvarna News Asianet Suvarna News

ಟಿ20ಯಲ್ಲಿ ಮತ್ತೊಂದು ಸ್ಫೋಟಕ ಶತಕ ಸಿಡಿಸಿದ ಗಪ್ಟಿಲ್

ನಾರ್ಥಾಂಪ್ಟನ್‌ಶೈರ್ ನೀಡಿದ್ದ 188 ರನ್’ಗಳ ಗುರಿ ಬೆನ್ನತ್ತಿದ ವೊರ್ಸೆಸ್ಟರ್‌ಶೈರ್ ಸುಮಾರು 7 ಓವರ್’ಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.

Martin Guptill Smashes Joint fourth Fastest T20 Century

ಲಂಡನ್[ಜು.28]: ನ್ಯೂಜಿಲೆಂಡ್’ನ ಸ್ಫೋಟಕ ಬ್ಯಾಟ್ಸ್’ಮನ್ ಮಾರ್ಟಿನ್ ಗಪ್ಟಿಲ್ ಚುಟುಕು ಕ್ರಿಕೆಟ್’ನಲ್ಲಿ ಮತ್ತೊಂದು ಸ್ಫೋಟಕ ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್’ನ ಕೌಂಟಿ ಕ್ರಿಕೆಟ್’ನ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ ನಾರ್ಥಾಂಪ್ಟನ್‌ಶೈರ್ ವಿರುದ್ಧ ಕೇವಲ 38 ಎಸೆತಗಳಲ್ಲಿ 102 ರನ್ ಸಿಡಿಸಿ ಮಿಂಚಿದರು. ಇದರೊಂದಿಗೆ ವೊರ್ಸೆಸ್ಟರ್‌ಶೈರ್ 9 ವಿಕೆಟ್’ಗಳ ಭರ್ಜರಿ ಜಯ ದಾಖಲಿಸಿತು. 

ನಾರ್ಥಾಂಪ್ಟನ್‌ಶೈರ್ ನೀಡಿದ್ದ 188 ರನ್’ಗಳ ಗುರಿ ಬೆನ್ನತ್ತಿದ ವೊರ್ಸೆಸ್ಟರ್‌ಶೈರ್ ಸುಮಾರು 7 ಓವರ್’ಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಕೇವಲ 35 ಎಸೆತಗಳಲ್ಲಿ ಶತಕ ಪೂರೈಸಿದ ಗಪ್ಟಿಲ್ ಟಿ20 ಕ್ರಿಕೆಟ್’ನಲ್ಲಿ ಅತಿವೇಗವಾಗಿ ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದರು. ಗಪ್ಟಿಲ್ ಸಿಡಿಲಬ್ಬರದ ಬ್ಯಾಟಿಂಗ್’ನಲ್ಲಿ 12 ಬೌಂಡರಿ ಹಾಗೂ 7 ಸಿಕ್ಸರ್’ಗಳು ಸೇರಿದ್ದವು.  

ಟಿ20 ಕ್ರಿಕೆಟ್’ನಲ್ಲಿ ಅತಿವೇಗವಾಗಿ ಶತಕ ಸಿಡಿಸಿದವರ ಪಟ್ಟಿಯಲ್ಲಿ ಗೇಲ್[30 ಎಸೆತ] ಮೊದಲ ಸ್ಥಾನದಲ್ಲಿದ್ದರೆ, ರಿಶಭ್ ಪಂತ್[32], ಆ್ಯಂಡ್ರೋ ಸೈಮಂಡ್ಸ್[34] ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಇನ್ನು ಲೂಯಿಸ್ ವ್ಯಾನ್’ಡರ್, ಡೇವಿಡ್ ಮಿಲ್ಲರ್, ರೋಹಿತ್ ಶರ್ಮಾ ಜತೆಗೆ ಗಪ್ಟಿಲ್[35 ಎಸೆತ] ಜಂಟಿ ನಾಲ್ಕನೇ ಸ್ಥಾನ ಹಂಚಿಕೊಂಡಿದ್ದಾರೆ.  

Follow Us:
Download App:
  • android
  • ios