ಹೃದಯದಲ್ಲಿ ನಾನೊಬ್ಬ ಪಾಕಿಸ್ತಾನಿ, ಹಾಗಾಗಿ ನನಗೆ ಲಾಹೋರ್‌'ಗೆ ಬರಲು ನಿರ್ಧರಿಸಲು ಹೆಚ್ಚಿಗೆ ಸಮಯ ಬೇಕಾಗಲಿಲ್ಲ ಎಂದು ಸ್ಯಾಮುಯಲ್ಸ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಲಾಹೋರ್(ಮಾ.12): ಪಾಕಿಸ್ತಾನ ಸೂಪರ್ ಲೀಗ್ ಚಾಂಪಿಯನ್ ತಂಡ ಪೇಶಾವರ್ ಝಲ್ಮಿ ತಂಡದ ಸದಸ್ಯರಾಗಿದ್ದ ವೆಸ್ಟ್‌ಇಂಡೀಸ್ ಆಟಗಾರ ಮರ್ಲಾನ್ ಸ್ಯಾಮುಯಲ್ಸ್, ಪಾಕಿಸ್ತಾನ ಸೇನೆಗೆ ಸೇರಲು ಇಚ್ಛಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಿಎಸ್‌'ಎಲ್ ಎರಡನೇ ಆವೃತ್ತಿಯ ಫೈನಲ್ ಪಂದ್ಯವನ್ನು ಲಾಹೋರ್‌'ನಲ್ಲಿ ಆಯೋಜಿಸಲಾಗಿತ್ತು. ಪಾಕಿಸ್ತಾನಕ್ಕೆ ತೆರಳಲು ಹಲವು ಅಂತಾರಾಷ್ಟ್ರೀಯ ಆಟಗಾರರು ಹಿಂಜರಿದಿದ್ದರು.

ಆದರೆ ಲಾಹೋರ್‌ನಲ್ಲಿ ಫೈನಲ್ ಆಡಿದ ಬಳಿಕ ಆಟಗಾರರಿಗೆ ಅತ್ಯುತ್ತಮ ಭದ್ರತೆ ಒದಗಿಸಿದ್ದಕ್ಕೆ ಪಾಕಿಸ್ತಾನ ಸರ್ಕಾರವನ್ನು ಹೊಗಳಿದ ಸ್ಯಾಮುಯಲ್ಸ್ , ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕೊರಿದ್ದಾರೆ.

ಹೃದಯದಲ್ಲಿ ನಾನೊಬ್ಬ ಪಾಕಿಸ್ತಾನಿ, ಹಾಗಾಗಿ ನನಗೆ ಲಾಹೋರ್‌'ಗೆ ಬರಲು ನಿರ್ಧರಿಸಲು ಹೆಚ್ಚಿಗೆ ಸಮಯ ಬೇಕಾಗಲಿಲ್ಲ ಎಂದು ಸ್ಯಾಮುಯಲ್ಸ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.