ಇಂಡೋ-ಆಫ್ರಿಕಾ ಟೆಸ್ಟ್; ಉಭಯ ತಂಡಗಳಿಗೆ ಮೊದಲ ದಿನದ ಗೌರವ

Markram Amla power SA to 269 for 6 on day 1
Highlights

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಉತ್ತಮ ಆರಂಭವನ್ನೇ ಪಡೆಯಿತು. ಎಲ್ಗಾರ್-ಮರ್ಕ್ರಾಮ್ ಜೋಡಿ 85 ರನ್ ಜತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿತು. ಈ ವೇಳೆ ಅಶ್ವಿನ್ ಸ್ಪಿನ್ ದಾಳಕ್ಕೆ ಎಲ್ಗಾರ್(31) ಪೆವಿಲಿಯನ್ ಸೇರಿದರು.

ಸೆಂಚೂರಿಯನ್(ಜ.13): ಆರಂಭಿಕ ಏಯ್ಡನ್ ಮರ್ಕ್ರಾಮ್ ಹಾಗೂ ಹಾಶೀಂ ಆಮ್ಲಾ ಸಮಯೋಚಿತ ಅರ್ಧಶತಕಗಳ ನೆರವಿನಿಂದ ದಕ್ಷಿಣ ಆಫ್ರಿಕಾ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 269 ರನ್ ಕಲೆಹಾಕಿದೆ. ಅಶ್ವಿನ್ ಚಾಣಾಕ್ಷ ಸ್ಪಿನ್ ಹಾಗೂ ಟೀಂ ಇಂಡಿಯಾದ ಚುರುಕಿನ ಕ್ಷೇತ್ರ ರಕ್ಷಣೆಯಿಂದ ಕೊಹ್ಲಿ ಪಡೆ ಕೂಡ ತಕ್ಕ ತಿರುಗೇಟು ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಉತ್ತಮ ಆರಂಭವನ್ನೇ ಪಡೆಯಿತು. ಎಲ್ಗಾರ್-ಮರ್ಕ್ರಾಮ್ ಜೋಡಿ 85 ರನ್ ಜತೆಯಾಟವಾಡುವ ಮೂಲಕ ಭದ್ರ ಬುನಾದಿ ಹಾಕಿತು. ಈ ವೇಳೆ ಅಶ್ವಿನ್ ಸ್ಪಿನ್ ದಾಳಕ್ಕೆ ಎಲ್ಗಾರ್(31) ಪೆವಿಲಿಯನ್ ಸೇರಿದರು. ಆ ಬಳಿಕ ಜತೆಯಾದ ಆಮ್ಲಾ-ಮರ್ಕ್ರಾಮ್ ಜೋಡಿ ಕೂಡಾ ಅರ್ಧಶತಕದ ಜತೆಯಾಟವಾಡಿ ತಂಡದ ಮೊತ್ತವನ್ನು 100ರ ಗಡಿ ದಾಟಿಸಿತು. ಆತ್ಮವಿಶ್ವಾಸದಿಂದ ಬ್ಯಾಟ್ ಬೀಸುತ್ತಿದ್ದ ಮರ್ಕ್ರಾಮ್ 94 ರನ್ ಬಾರಿಸಿ ಅಶ್ವಿನ್'ಗೆ ಎರಡನೇ ಬಲಿಯಾದರು. ಇದಾದ ಕೆಲಹೊತ್ತಿನಲ್ಲೇ ಎಬಿಡಿಯನ್ನು ಬೌಲ್ಡ್ ಮಾಡಿದ ಇಶಾಂತ್ ಶರ್ಮಾ ಭಾರತಕ್ಕೆ ಮೇಲುಗೈ ಒದಗಿಸಿಕೊಡುವಲ್ಲಿ ಸಫಲವಾದರು. ಆ ನಂತರ ನೆಲಕಚ್ಚಿ ಆಡುತ್ತಿದ್ದ ಆಮ್ಲಾರನ್ನು ಚುರುಕಿನ ಕ್ಷೇತ್ರರಕ್ಷಣೆ ಮೂಲಕ ಹಾರ್ದಿಕ್ ಪಾಂಡ್ಯ ಆಲೌಟ್ ಮಾಡಿದರು. ಆಗ ದಕ್ಷಿಣ ಆಫ್ರಿಕಾ ತಂಡದ ಮೊತ್ತ 246/4.

ಈ ವೇಳೆ ಒತ್ತಡಕ್ಕೆ ಸಿಲುಕಿದ ಆಫ್ರಿಕಾ ಮರು ಓವರ್'ನಲ್ಲೇ ಕ್ವಿಂಟನ್ ಡಿಕಾಕ್ ಬಲಿ ಪಡೆದ ಅಶ್ವಿನ್ ಮತ್ತೆ ಆಫ್ರಿಕಾಕ್ಕೆ ಕಂಟಕವಾಗಿ ಪರಿಣಮಿಸಿದರು. ಮರು ಓವರ್'ನಲ್ಲಿ ಇನ್ನಿಲ್ಲದ ರನ್ ಕದಿಯಲು ಹೋಗಿ ಫಿಲಾಂಡರ್ ರನೌಟ್'ಗೆ ಬಲಿಯಾದರು. ಇದೀಗ ನಾಯಕ ಡು ಪ್ಲಸಿಸ್(24*) ಹಾಗೂ ಕೇಶವ್ ಮಹರಾಜ್(10*) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತ ಪರ ಅಶ್ವಿನ್ 3 ವಿಕೆಟ್ ಪಡೆದರೆ, ಇಶಾಂತ್ ಶರ್ಮಾ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್: 269/6

ಮರ್ಕ್ರಾಮ್: 94

ಅಶ್ವಿನ್:90/3

(*ಮೊದಲ ದಿನದಂತ್ಯಕ್ಕೆ)   

loader