ಕ್ವಾರ್ಟರ್'ಫೈನಲ್'ಗೆ ಲಗ್ಗೆಯಿಟ್ಟ ಶರಪೋವಾ

First Published 12, Oct 2017, 9:46 PM IST
Maria Sharapova storms into quarterfinals of Tianjin Open
Highlights

ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಶಿಕ್ಷೆ ಮುಗಿಸಿ 15 ತಿಂಗಳ ಬಳಿಕ ಟೆನಿಸ್‌'ಗೆ ಮರಳಿರುವ ಶರಪೋವಾ ಇದೇ ಮೊದಲ ಬಾರಿ ಎಂಟರಘಟ್ಟಕ್ಕೇರಿದ್ದಾರೆ.

ಟಿಯಾನ್ಜಿನ್(ಅ.12): ರಷ್ಯಾದ ಟೆನಿಸ್ ಆಟಗಾರ್ತಿ ಮರಿಯಾ ಶರಪೋವಾ, ಟಿಯಾನ್ಜಿನ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್‌'ಫೈನಲ್ ಪ್ರವೇಶಿಸಿದ್ದಾರೆ.

ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಶಿಕ್ಷೆ ಮುಗಿಸಿ 15 ತಿಂಗಳ ಬಳಿಕ ಟೆನಿಸ್‌'ಗೆ ಮರಳಿರುವ ಶರಪೋವಾ ಇದೇ ಮೊದಲ ಬಾರಿ ಎಂಟರಘಟ್ಟಕ್ಕೇರಿದ್ದಾರೆ.

ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಶರಪೋವಾ 7-5, 6-3 ಸೆಟ್‌'ಗಳಿಂದ ಸ್ವಿಜರ್‌'ಲೆಂಡ್‌'ನ ಸ್ಟೀಫನಿ ವೊಘೆಲೆ ಎದುರು ಗೆಲುವು ಸಾಧಿಸಿದರು. 30 ವರ್ಷ ವಯಸ್ಸಿನ ಶರಪೋವಾ. ಮಾಜಿ ನಂ.1 ಆಟಗಾರ್ತಿ ಶರಪೋವಾ ಸದ್ಯ 86ನೇ ಶ್ರೇಯಾಂಕ ಹೊಂದಿದ್ದಾರೆ. ಟಿಯಾನ್ಜಿನ್ ಟೆನಿಸ್ ಟೂರ್ನಿಯಲ್ಲಿ ಶರಪೋವಾ ವೈಲ್ಡ್‌'ಕಾರ್ಡ್ ಪ್ರವೇಶ ಪಡೆದಿದ್ದರು.

loader