ಫ್ರೆಂಚ್‌ ಓಪನ್‌ನಿಂದ ಹಿಂದೆ ಸರಿದ ಶರಪೋವಾ

2 ಬಾರಿ ಫ್ರೆಂಚ್‌ ಓಪನ್‌ ಚಾಂಪಿಯನ್‌ ಶರಪೋವಾ, ಜನವರಿಯಿಂದ ಯಾವುದೇ ಟೂರ್ನಿಯಲ್ಲಿ ಆಡಿಲ್ಲ.ಇದೀಗ ಫ್ರೆಂಚ್‌ ಓಪನ್‌ನಿಂದ ಶರಪೋವಾ ಹಿಂದೆ ಸರಿದಿದ್ದಾರೆ.

Maria Sharapova pulls out french open 2019

ಪ್ಯಾರಿಸ್‌: ರಷ್ಯಾದ ತಾರಾ ಟೆನಿಸ್‌ ಆಟಗಾರ್ತಿ ಮರಿಯಾ ಶರಪೋವಾ ಭುಜದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು ಮುಂಬರುವ ಫ್ರೆಂಚ್‌ ಓಪನ್‌ ಗ್ರ್ಯಾಂಡ್‌ಸ್ಲಾಂ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

2 ಬಾರಿ ಫ್ರೆಂಚ್‌ ಓಪನ್‌ ಚಾಂಪಿಯನ್‌ ಶರಪೋವಾ, ಜನವರಿಯಿಂದ ಯಾವುದೇ ಟೂರ್ನಿಯಲ್ಲಿ ಆಡಿಲ್ಲ. ‘ಕೆಲವೊಮ್ಮೆ ಒಳ್ಳೆಯ ನಿರ್ಧಾರಗಳನ್ನು ಕೈಗೊಳ್ಳುವುದು ಸುಲಭವಲ್ಲ’ ಎಂದು ಶರಪೋವಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ಸಂತಸದ ವಿಷಯವೆಂದರೆ ನಾನು ಅಭ್ಯಾಸ ಆರಂಭಿಸಿದ್ದೇನೆ. ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದ್ದೇನೆ’ ಎಂದು ಶರಪೋವಾ ತಿಳಿಸಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

Latest Videos
Follow Us:
Download App:
  • android
  • ios