ಫ್ರೆಂಚ್ ಓಪನ್ ಟೂರ್ನಿಯು ಮೇ.28ರಿಂದ ಆರಂಭವಾಗಲಿದೆ.
ಪ್ಯಾರಿಸ್(ಮೇ.17): ಎರಡು ಬಾರಿ ಚಾಂಪಿಯನ್ ರಷ್ಯಾದ ಮರಿಯಾ ಶರಪೋವಾಗೆ ವೈಲ್ಡ್‌ಕಾರ್ಡ್ ನೀಡಲು ಫ್ರೆಂಚ್ ಓಪನ್ ಆಯೋಜಕರು ನಿರಾಕರಿಸಿದ್ದಾರೆ.
ಫ್ರೆಂಚ್ ಟೆನಿಸ್ ಸಂಸ್ಥೆಯ ಅಧ್ಯಕ್ಷ ಬೆನಾರ್ಡ್ ಗ್ಯುಡಿಸೆಲ್ಲಿ, ಫೇಸ್‌ಬುಕ್ ಲೈವ್'ನಲ್ಲಿ ಈ ನಿರ್ಧಾರ ಪ್ರಕಟಿಸಿದರು. ಎಲ್ಲಾ ನಾಲ್ಕೂ ಗ್ರ್ಯಾಂಡ್'ಸ್ಲಾಂಗಳನ್ನೂ ಗೆದ್ದಿರುವ ಶರಪೋವಾ, ಫ್ರೆಂಚ್ ಓಪನ್'ನಲ್ಲಿ 2012 ಹಾಗೂ 2014ರಲ್ಲಿ ಪ್ರಶಸ್ತಿ ಗೆದ್ದಿದ್ದರು.
ಅವರ ಶ್ರೇಯಾಂಕ 200ರ ಆಚೆ ಇರುವುದೇ ವೈಲ್ಡ್'ಕಾರ್ಡ್ ನಿರಾಕರಿಸಲು ಕಾರಣ ಎನ್ನಲಾಗಿದೆ. 15 ತಿಂಗಳ ನಿಷೇಧದ ಬಳಿಕ ಟೆನಿಸ್‌ಗೆ ಮರಳಿದ ಶರಪೋವಾ, ಈ ವರೆಗೂ ಮೂರು ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಆಡಿದ್ದಾರೆ.
ಫ್ರೆಂಚ್ ಓಪನ್ ಟೂರ್ನಿಯು ಮೇ.28ರಿಂದ ಆರಂಭವಾಗಲಿದೆ.
