ಸೇಂಟ್ ಪೀಟರ್ಸ್‌ಬರ್ಗ್[ಜೂ.28]: ನೈಜೀರಿಯಾ ವಿರುದ್ಧ ಪಂದ್ಯದ ದ್ವಿತೀಯಾರ್ಧಕ್ಕೂ ಮುನ್ನ ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್ ಮೆಸ್ಸಿ, ತಮ್ಮ ಸಹ ಆಟಗಾರರಿಗೆ ಸ್ಫೂರ್ತಿದಾಯಕ ಮಾತುಗಳನ್ನು ಹೇಳಿದ್ದರಂತೆ. 

‘ದ್ವಿತೀಯಾರ್ಧಕ್ಕೆ ಕಣಕ್ಕಿಳಿಯುವ ಮುನ್ನ ಮೆಸ್ಸಿ ಇದು ಸಾವು-ಬದುಕಿನ ಪ್ರಶ್ನೆ. ಎಷ್ಟು ಸಾಧ್ಯವೋ ಅಷ್ಟು ಹೋರಾಡಿ. ಜಯ ನಮ್ಮದಾಗಲಿದೆ’ ಎಂದು ಎಲ್ಲರಲ್ಲೂ ಸ್ಫೂರ್ತಿ ತುಂಬಿದ್ದರು’ ಎಂದು 86ನೇ ನಿಮಿಷದಲ್ಲಿ ಗೋಲು ಬಾರಿಸಿ ಅರ್ಜೆಂಟೀನಾ ಜಯಕ್ಕೆ ಕಾರಣರಾದ ರೋಜೋ ಬಹಿರಂಗ ಪಡಿಸಿದ್ದಾರೆ.

ನೈಜೀರಿಯಾ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಅರ್ಜಿಂಟೀನಾ ತಂಡ 2-1 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿತ್ತು. ಮೆಸ್ಸಿ ಹಾಗೂ ರೋಜೋ ತಲಾ ಒಂದೊಂದು ಗೋಲು ಬಾರಿಸಿದ್ದರು. ಇದೀಗ 16ರ ಘಟ್ಟದಲ್ಲಿ ಅರ್ಜಿಂಟೀನಾ ತಂಡವು ಬಲಿಷ್ಠ ಫ್ರಾನ್ಸ್ ತಂಡವನ್ನು ಶನಿವಾರ[ಜೂ.30] ಎದುರಿಸಲಿದೆ