ಫುಟ್ಬಾಲ್ ದಿಗ್ಗಜ ಡಿಯಾಗೋ ಮರಡೋನಾ ಮತ್ತೊಂದು ವಿವಾದಲ್ಲಿ ಸಿಲುಕಿದ್ದಾರೆ. ಜನಾಂಗೀಯ ನಿಂದನೆ ಆರೋಪದ ಬೆನ್ನಲ್ಲೇ, ಇದೀಗ ಸಿಗರೇಟು ಬೂದಿ ಮರಡೋನಾಗೆ ಮೆತ್ತಿಕೊಂಡಿದೆ. ಏನಿದು ಸಿಗರೇಟು ವಿವಾದ? ಇಲ್ಲಿದೆ ವಿವರ
ರಷ್ಯಾ(ಜೂ.18): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ದಿಗ್ಗಜ ಫುಟ್ಬಾಲ್ ಪಟು ಡಿಯಾಗೋ ಮರಡೋನಾ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ. ಈಗಾಗಲೇ ದಕ್ಷಿಣ ಕೊರಿಯಾ ಅಭಿಮಾನಿಗಳಿಗೆ ಜನಾಂಗಿಯ ನಿಂದನೆ ಮಾಡಿದ್ದಾರೆ ಅನ್ನೋ ಆರೋಪ ಮಾಸೋ ಮುನ್ನವೇ, ಕ್ರೀಡಡಾಂಗಣದಲ್ಲೇ ಧೂಮಪಾನ ಮಾಡಿ ಮತ್ತೆ ವಿವಾದ ಸೃಷ್ಟಿಸಿದ್ದಾರೆ.
ಅರ್ಜೆಂಟೀನಾ ಹಾಗೂ ಐಸ್‌ಲೆಂಡ್ ನಡುವಿನ ಪಂದ್ಯ ವೀಕ್ಷಿಸಲು ಮೈದಾನಕ್ಕೆ ಆಗಮಿಸಿದ್ದ ಮಾಜಿ ಫುಟ್ಬಾಲ್ ಪಟು ಮರಡೋನಾ, ಗ್ಯಾಲರಿಯಲ್ಲಿ ಸಿಗರೇಟು ಸೇದಿ ವಿವಾದಕ್ಕೆ ಕಾರಣರಾಗಿದ್ದಾರೆ. ಕ್ರೀಡಾಂಗಣದಲ್ಲಿ ಧೂಮಪಾನ ಮಾಡುವಂತಿಲ್ಲ. ಇಡೀ ಕ್ರೀಂಡಾಗಣದಲ್ಲಿ ಧೂಮಪಾನ ನಿಷೇಧ ಫಲಕ ಹಾಕಿದ್ದರೂ, ಮರಡೋನ ಮಾತ್ರ ಸಿಗರೇಟು ಸೇದೋ ಮೂಲಕ ನಿಯಮ ಉಲ್ಲಂಘಿಸಿದ್ದಾರೆ.
ಪಂದ್ಯ ವೀಕ್ಷಿಸುವ ವೇಳೆ ಧೂಮಪಾನ ಮಾಡಿದ ಮರಡೋನಾ ಅಭಿಮಾನಿಗಳ ಜೊತೆಗೆ ಫೋಟೋಗೆ ಫೋಸ್ ನೀಡುವಾಗಲೂ ಧೂಮಪಾನ ಮಾಡಿದ್ದಾರೆ. ಇದೀಗ ಮರಡೋನಾ ಧೋಮಪಾನಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.
ಇದೇ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಅಭಿಮಾನಿಗಳ ಕಡೆ ಮರಡೋನಾ ಜನಾಂಗೀಯ ನಿಂದನೆ ಮಾಡುವಂತಹ ಅಂಗಸನ್ನೆಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಫುಟ್ಬಾಲ್ ದಿಗ್ಗಜ, ‘ಪಂದ್ಯದ ವೇಳೆ ಏಷ್ಯಾದ ಕೆಲ ಅಭಿಮಾನಿಗಳು ಅರ್ಜೆಂಟೀನಾದ ಟೀ-ಶರ್ಟ್ ಧರಿಸಿ, ಅರ್ಜೆಂಟೀನಾ ತಂಡವನ್ನು ಪ್ರೋತ್ಸಾಹಿಸಿದ್ದನ್ನು ಕಂಡು ಸಂತಸವಾಯಿತು. ಇದನ್ನು ಅವರಿಗೆ ಹೇಳಲು ಪ್ರಯತ್ನಿಸಿದೆ’ ಎಂದಿದ್ದಾರೆ.
