ಆಫ್ಘನ್ ಟೆಸ್ಟ್’ಗೆ ಟೀಂ ಇಂಡಿಯಾದ 8 ಆಟಗಾರರು ಗೈರು..?

Many top Indian players could miss Afghanistan Test
Highlights

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ 3 ಏಕದಿನ, 3 ಟಿ20 ಮತ್ತು 5 ಟೆಸ್ಟ್ ಪಂದ್ಯಗಳನ್ನಾಡಲಿದೆ. 

ಮುಂಬೈ[ಮೇ.06]: ಜೂನ್ 14 ರಿಂದ 18ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಆಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌'ಗೆ ನಾಯಕ ಕೊಹ್ಲಿ ಸೇರಿದಂತೆ ಭಾರತ ತಂಡದ ಪ್ರಮುಖ 8 ಆಟಗಾರರು ಅಲಭ್ಯರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಜುಲೈನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಪೂರ್ವತಯಾರಿನಡೆಸುವ ನಿಟ್ಟಿನಲ್ಲಿ ಕೊಹ್ಲಿ ಒಂದು ತಿಂಗಳು ಮೊದಲೇ ಇಂಗ್ಲೆಂಡ್‌'ಗೆ ತೆರಳುತ್ತಿದ್ದಾರೆ. ಇದೀಗ ಕೊಹ್ಲಿ ಜತೆಯಲ್ಲಿ ಅಶ್ವಿನ್, ಭುವನೇಶ್ವರ್, ಬುಮ್ರಾ, ಇಶಾಂತ್, ರಹಾನೆ, ಪೂಜಾರ, ಮುರುಳಿ ವಿಜಯ್ ಹಾಗೂ ಧವನ್ ಕೂಡ ಇಂಗ್ಲೆಂಡ್‌’ಗೆ ತೆರಳಲು ಸಿದ್ಧತೆ ನಡೆಸಿದ್ದಾರೆ ಎಂದು ಬಿಸಿಸಿಐ ಮೂಲಗಳು ಸ್ಪಷ್ಟಪಡಿಸಿವೆ. ಒಂದು ವೇಳೆ ಅವಶ್ಯಕತೆ ಬಿದ್ದರೆ ಕೆಲ ಕ್ರಿಕೆಟಿಗರು ಟೆಸ್ಟ್ ಪಂದ್ಯದ ವೇಳೆ ಇಂಗ್ಲೆಂಡ್’ನಿಂದ ಬಂದು ಟೆಸ್ಟ್ ಆಡಿ ಬಳಿಕ ಮತ್ತೆ ಇಂಗ್ಲೆಂಡ್’ಗೆ ತೆರಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ 3 ಏಕದಿನ, 3 ಟಿ20 ಮತ್ತು 5 ಟೆಸ್ಟ್ ಪಂದ್ಯಗಳನ್ನಾಡಲಿದೆ. 

loader