ಮೊಹಾಲಿ(ಜೂ.23): ಟೀಂ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್ ವಿದಾಯ ಹೇಳಿದ ಬೆನ್ನಲ್ಲೇ ಇದೀಗ ಮತ್ತೊರ್ವ ಪಂಜಾಬ್ ಕ್ರಿಕೆಟಿಗ ಮನ್‌ಪ್ರೀತ್ ಸಿಂಗ್ ಗೋನಿ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಪಂಜಾಬ್ ಕ್ರಿಕೆಟ್ ಸಂಸ್ಥೆಗೆ ಪತ್ರದ ಮೂಲಕ ಗೋನಿ ವಿದಾಯ ಹೇಳಿದ್ದಾರೆ. ಟೀಂ ಇಂಡಿಯಾ ಪರ 2 ಏಕದಿನ ಪಂದ್ಯ ಆಡಿರುವ ಮನ್‌ಪ್ರೀತ್ ಸಿಂಗ್, ರಣಜಿ, ಐಪಿಎಲ್ ಹಾಗೂ ದೇಸಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಇದನ್ನೂ ಓದಿ: ಭಾರತ- ವೆಸ್ಟ್ ಇಂಡೀಸ್ ಸರಣಿ: ಕೊಹ್ಲಿ-ಬುಮ್ರಾಗೆ ರೆಸ್ಟ್?

2008ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತಕ್ಕೆ ಪಾದಾರ್ಪಣೆ ಮಾಡಿದ ಗೋನಿ, ಹಾಂಕ್ ಕಾಂಗ್ ವಿರುದ್ಧ ಮೊದಲ ಪಂದ್ಯ ಆಡಿದ್ದರು. ಪಾಕಿಸ್ತಾನದಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದೊಂದಿಗೆ  ಗೋನಿ ಅಂತಾರಾಷ್ಟ್ರೀಯ ಕರಿಯರ್ ಮಂಕಾಯಿತು. ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಡೆಕ್ಕನ್ ಚಾರ್ಜಸ್, ಗುಜರಾತ್ ಲಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಕಣಕ್ಕಿಳಿದಿದ್ದಾರೆ. 61 ಪ್ರಥಮ ದರ್ಜೆ, 55 ಲಿಸ್ಟ್ ಎ ಹಾಗೂ 90 ಟಿ20 ಪಂದ್ಯ ಆಡಿರುವ ಗೋನಿ 369 ವಿಕೆಟ್ ಕಬಳಿಸಿದ್ದಾರೆ. 

ಇದನ್ನೂ ಓದಿ: ತೆಂಡುಲ್ಕರ್ ಪೋಟೋ ಹಾಕಿ ಟ್ರೋಲ್ ಆದ ಇಮ್ರಾನ್ ಖಾನ್ ಅಸಿಸ್ಟೆಂಟ್!

ಇಂಜುರಿ ಹಾಗೂ ಫಿಟ್ನೆಸ್ ಸಮಸ್ಸೆಯಿಂದ ಬಳಲಿದ ಮನ್‌ಪ್ರೀತ್ ಸಿಂಗ್ ಗೋನಿ ಇದೀಗ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಪಂಜಾಬ್ ಕ್ರಿಕೆಟ್‌ಗೆ ಕೊಡುಗೆ ನೀಡಿದ ಗೋನಿಗೆ ಪಂಜಾಬ್ ಕ್ರಿಕೆಟ್ ಸಂಸ್ಥೆ ಶುಭಹಾರೈಸಿದೆ.