ಹೊಸ ತಂಡವನ್ನು ಸೇರಿದ್ದರ ಬಗ್ಗೆ ಟ್ವೀಟ್ ಮಾಡಿರುವ ಪಾಂಡೆ, ಕಿತ್ತಳೆ ಬಣ್ಣದ ಜೆರ್ಸಿಯಲ್ಲಿ ಆಡಲು ಕಾತುರನಾಗಿದ್ದೇನೆ. ಅದೇ ರೀತಿ ಹಲವಾರು ಅದ್ಭುತ ಸನ್ನಿವೇಶಗಳನ್ನು ಒದಗಿಸಿಕೊಟ್ಟ ಕೆಕೆಆರ್ ತಂಡಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಐಪಿಎಲ್ ಹರಾಜಿನಲ್ಲಿ ಕನ್ನಡಿಗ ಮನೀಶ್ ಪಾಂಡೆ 11 ಕೋಟಿ ರುಪಾಯಿಗೆ ಸನ್'ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿದೆ.
ಕೋಲ್ಕತಾ ನೈಟ್ ರೈಡರ್ಸ್ ಪರ ಯಶಸ್ವಿ ಬ್ಯಾಟ್ಸ್'ಮನ್ ಎನಿಸಿಕೊಂಡಿದ್ದ ಪಾಂಡೆಯನ್ನು ನೈಟ್'ರೈಡರ್ಸ್ ಉಳಿಸಿಕೊಳ್ಳಲು ಪ್ರಯತ್ನಿಸಿತಾದರೂ, ಅಂತಿಮವಾಗಿ 11 ಕೋಟಿಗೆ ಸನ್'ರೈಸರ್ಸ್ ಪ್ರಾಂಚೈಸಿ ಪಾಂಡೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ಹೊಸ ತಂಡವನ್ನು ಸೇರಿದ್ದರ ಬಗ್ಗೆ ಟ್ವೀಟ್ ಮಾಡಿರುವ ಪಾಂಡೆ, ಕಿತ್ತಳೆ ಬಣ್ಣದ ಜೆರ್ಸಿಯಲ್ಲಿ ಆಡಲು ಕಾತುರನಾಗಿದ್ದೇನೆ. ಅದೇ ರೀತಿ ಹಲವಾರು ಅದ್ಭುತ ಸನ್ನಿವೇಶಗಳನ್ನು ಒದಗಿಸಿಕೊಟ್ಟ ಕೆಕೆಆರ್ ತಂಡಕ್ಕೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕೆಕೆಆರ್, ಖಂಡಿತ ಸದಾ ನೆನಪಿನಲ್ಲಿ ಉಳಿಯುವಂತಹ ಸನ್ನಿವೇಶ ನಿರ್ಮಿಸಿದ್ದೀರಿ. ಮುಂದಿನ ದಿನಗಳು ನಿಮಗೆ ಒಳಿತಾಗಲಿ ಎಂದು ಪಾಂಡೆಯನ್ನು ಸ್ಮರಿಸಿ ಟ್ವೀಟ್ ಮಾಡಿದೆ.
