ಮುಂಬೈ[ಆ.20]: ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಗೆ ಭಾರತ ‘ಎ ’ತಂಡ ಪ್ರಕಟಗೊಂಡಿದ್ದು, ಮೊದಲ 3 ಪಂದ್ಯಗಳಿಗೆ ಕರ್ನಾಟಕದ ಮನೀಶ್‌ ಪಾಂಡೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನುಳಿದ 2 ಪಂದ್ಯಗಳಲ್ಲಿ ಶ್ರೇಯಸ್‌ ಅಯ್ಯರ್‌ ತಂಡವನ್ನು ಮುನ್ನಡೆಸಲಿದ್ದಾರೆ. 

ಭಾರತ ವಿರುದ್ಧದ ಸರಣಿಗೆ ಸೌತ್ ಆಫ್ರಿಕಾ ತಂಡ ಪ್ರಕಟ!

ಆಗಸ್ಟ್ 29ರಿಂದ ಸೆ.8ರ ವರೆಗೂ ತಿರುವನಂತಪುರದಲ್ಲಿ ಸರಣಿ ನಡೆಯಲಿದೆ. ಶುಭ್‌ಮನ್‌ ಗಿಲ್‌, ವಿಜಯ್‌ ಶಂಕರ್‌, ಅಕ್ಷರ್‌ ಪಟೇಲ್‌, ನಿತೀಶ್‌ ರಾಣಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಯಜುವೇಂದ್ರ ಚಹಲ್‌ ಮೊದಲ 3 ಪಂದ್ಯಗಳಲ್ಲಿ ಆಡಲಿದ್ದಾರೆ.

ಟೆಸ್ಟ್ ಶ್ರೇಯಾಂಕ: ನಂ.1 ಪಟ್ಟಕ್ಕೆ ಕೊಹ್ಲಿಗೆ ಸ್ಮಿತ್‌ ಪೈಪೋಟಿ!

ಸೆಪ್ಟೆಂಬರ್ 15ರಿಂದ ಅಕ್ಟೋಬರ್ 23ರ ವರೆಗೆ ದಕ್ಷಿಣ ಆಫ್ರಿಕಾ ತಂಡವು ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ 3 ಟಿ20 ಹಾಗೂ 3 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.