ಕಳೆದ ಎರಡು ಪಂದ್ಯದಂತೆಯೇ ನಿನ್ನೆಯೂ ಟೀಂ ಇಂಡಿಯಾ ಜಯ ಸಾಧಿಸ್ತು. ಆದ್ರೆ ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ ಬೌಲಿಂಗ್ ಏನೂ ಮಾಡದೇ ಇದ್ರೂ ಇಂದು ಹೀರೋ ಎನಿಸಿಕೊಂಡಿರೋದು ಮಾತ್ರ ನಮ್ಮ ಕನ್ನಡಿಗ ಮನೀಶ್ ಪಾಂಡೆ. ಅಂತದ್ದೇನು ಮಾಡಿದನಪ್ಪಾ ಪಾಂಡೆ ಅಂತೀರಾ..? ಇಲ್ಲಿದೆ ನೋಡಿ ವಿವರ
ಈಗ ಟೀಂ ಇಂಡಿಯಾ ನಾಯಕನ ಗುಣಗಾನದಲ್ಲಿ ನಿರತರಾಗಿದ್ದಾರೆ. ಆದರೆ ಕೊಹ್ಲಿಯಷ್ಟೇ ಈಗ ಫುಲ್ ಫೇಮಸ್ ಆಗಿರುವುದಲ್ಲ ನಮ್ಮ ಕನ್ನಡದ ಕಂದ ಮನೀಶ್ ಪಾಂಡೆ. ಹೌದು, ಆಸೀಸ್ ವಿರುದ್ಧದ ಮೊದಲೆರಡು ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ ದೇಶದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದ ಪಾಂಡೆ, ಇಂದು ಒಂದೇ ಒಂದು ಕ್ಯಾಚ್'ನಿಂದ ದೇಶದ ಮನಗೆದ್ದಿದ್ದಾರೆ. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅಷ್ಟಕ್ಕೂ ಇಂದು ಪಾಂಡೆಯನ್ನ ಹೀರೋ ಮಾಡಿರೋ ಆ ಕ್ಯಾಚ್ ಯಾವುದು ಗೊತ್ತಾ..? ನೀವೇ ನೋಡಿ.
ಪಾಂಡೆಯ ಅದ್ಭುತ ಕ್ಯಾಚ್ ಈಗ ವೈರಲ್..!: ವರ್ಷದ ಬೆಸ್ಟ್ ಕ್ಯಾಚ್ ಎಂದು ವರ್ಣಿಸಿದ ಫ್ಯಾನ್ಸ್
ಆಸೀಸ್ಗಳು ಆರಂಭದಲ್ಲಿ ಅಬ್ಬರಿಸಿದ ರೀತಿ ನೋಡಿ ಎಲ್ರೂ ಮುನ್ನೂರಕ್ಕಿಂತ ಹೆಚ್ಚು ರನ್ ಬರುತ್ತೆ ಅಂತಲೇ ಅಂದುಕೊಂಡಿದ್ರು. ಆದ್ರೆ ನಿರ್ಣಾಯಕ ಸಂದರ್ಭದಲ್ಲಿ ಪೀಟರ್ ಹ್ಯಾಂಡ್ಸ್'ಕೊಂಬ್'ರ ಕ್ಯಾಚ್ ಹಿಡಿಯುವ ಮೂಲಕ ಆಸ್ಟ್ರೇಲಿಯಾಗೆ ದೊಡ್ಡ ಪೆಟ್ಟುಕೊಟ್ರು. ಹ್ಯಾಂಡ್ಸ್ಕೊಂಬ್ ಬಾರಿಸಿದ ಚೆಂಡು ನೇರವಾಗಿ ಲಾಂಗ್ ಆಫ್ನಲ್ಲಿದ್ದ ಮನೀಶ್ ಪಾಂಡೆ ಕಡೆ ಬಂತು. ಇನ್ನೇನು ಸಿಕ್ಸ್ ಹೋಗುತ್ತೆ ಎನ್ನುವಾಗ್ಲೇ ಪಾಂಡೆ ಅದ್ಭುತವಾಗಿ ಜಂಪ್ ಮಾಡಿ ಕ್ಯಾಚ್ ಹಿಡಿದ್ರು. ಸದ್ಯ ಪಾಂಡೆಯ ಈ ಕ್ಯಾಚ್ನ ವಿಡಿಯೋ ವೈರಲ್ ಆಗಿದ್ದು. ಎಲ್ರೂ ಫಿದಾ ಆಗ್ಬಿಟ್ಟಿದ್ದಾರೆ. ಅಷ್ಟೇ ಅಲ್ಲ ನಿನ್ನೆಯ ಈ ಕ್ಯಾಚ್ ಈ ವರ್ಷದ ಬೆಸ್ಟ್ ಕ್ಯಾಚ್ ಎಂದು ಬಣ್ಣಿಸಿದ್ದಾರೆ.
ಪಾಂಡೆಯ ಕಮಾಲ್ ಇದೇ ಮೊದಲೇನಲ್ಲ
ಪಾಂಡೆಯ ನಿನ್ನೆಯ ಕ್ಯಾಚ್ ಆಕಸ್ಮಿಕವಲ್ಲ, ಬದಲಿಗೆ ಪಾಂಡೆ ಒಬ್ಬ ಅದ್ಭುತ ಫೀಲ್ಡರ್. ಅದಕ್ಕೆ ಪುರಾವೆ ಎಂಬಂತೆ ಈ ಹಿಂದೆ ಅಂದ್ರೆ 2016ರಲ್ಲಿ ಆಸ್ಟ್ರೇಲಿಯಾದಲ್ಲಿ ಇಂಥದ್ದೆ ಒಂದು ಅದ್ಭುತ ಕ್ಯಾಚ್ ಹಿಡಿದಿದ್ದರು.
ದಶಕದ ಕ್ಯಾಚ್ ಹಿಡಿದಿರೋದು ಪಾಂಡೆಯೇ..!
ಪಾಂಡೆಗೆ ಈ ರೀತಿ ಜಿಂಕೆಯಂತೆ ಹಾರಿ ಕ್ಯಾಚ್ ಹಿಡಿಯೋ ನ್ಯಾಕ್ ಬಂದಿದ್ದು ಇಂದು ನಿನ್ನೆಯಲ್ಲ, ಆತನ ಕ್ಯಾಚ್ ಹಿಸ್ಟರಿ ದೊಡ್ಡದ್ದೇ ಇದೆ. ಮೈಸೂರಿನಲ್ಲಿ ನಡೆದ 2010ರ ರಣಜಿ ಟ್ರೋಫಿ ಫೈನಲ್ನಲ್ಲಿ ಮುಂಬೈ ಮುಂಬೈ ವಿರುದ್ಧ ಅಭಿಷೇಕ್ ನಾಯರ ಕ್ಯಾಚ್ ಹಿಡಿದಿದ್ದರು. ದಶಕದ ಕ್ಯಾಚ್ ಹಿಡಿದು ಅಂದೇ ಎಲ್ಲರ ಕಣ್ಣು ಬೀಳುವಂತೆ ಮಾಡಿದ್ದ ಪಾಂಡೆ.
ಒಟ್ಟಿನಲ್ಲಿ ಇಂದು ಮನೀಶ್ ಪಾಂಡೆ ಎಲ್ಲರ ಪಾಲಿನ ಹೀರೋ ಆಗಿದ್ದಾರೆ. ಆದ್ರೆ ಕೋಟ್ಯಾಂತರ ಕನ್ನಡಿಗರಿಗೆ ಖುಷಿಯವೇನಂದ್ರೆ ಟೀಂ ಇಂಡಿಯಾದಲ್ಲಿರುವ ಬೆಸ್ಟ್ ಫೀಲ್ಡರ್ ನಮ್ಮ ಕರ್ನಾಟಕದ ಹುಡುಗ ಅನ್ನೋದು.
