ನವದೆಹಲಿ(ಡಿ.13): ಅಂತಾರಾಷ್ಟ್ರೀಯ ಟೇಬಲ್‌ ಟೆನಿಸ್‌ ಸಂಸ್ಥೆ ನೀಡುವ ಪ್ರತಿಷ್ಠಿತ ‘ಬ್ರೇಕ್‌ಥ್ರೂ ಸ್ಟಾರ್‌’ ಪ್ರಶಸ್ತಿಗೆ ಭಾರತದ ಮನಿಕಾ ಬಾತ್ರಾ ಪಾತ್ರರಾಗಿದ್ದಾರೆ. ಈ ಪ್ರಶಸ್ತಿ ಪಡೆದ ಭಾರತದ ಮೊದಲ ಟೇಬಲ್‌ ಟೆನಿಸ್‌ ಪಟು ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. 

 

 

ದಕ್ಷಿಣ ಕೊರಿಯಾದ ಇಂಚಾನ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ‘ಪ್ರಶಸ್ತಿಗೆ ಆಯ್ಕೆಯಾಗಿದ್ದಕ್ಕೆ ಹೆಮ್ಮೆಯಾಗುತ್ತಿದೆ. 2018 ನನ್ನ ಪಾಲಿನ ಶ್ರೇಷ್ಠ ವರ್ಷ. ನನ್ನ ಸಾಧನೆ ಬಗ್ಗೆ ಖುಷಿ ಇದೆ’ ಎಂದು ಮನಿಕಾ ಹೇಳಿದರು. ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 4 ಚಿನ್ನ ಗೆದ್ದಿದ್ದ ಮನಿಕಾ, ಏಷ್ಯನ್‌ ಗೇಮ್ಸ್‌ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದರು.