ಮಳೆಯ ಕಾರಣ ಎರಡನೇ ಸೆಮಿಫೈನಲ್ ಪಂದ್ಯ ತಡವಾಗಿ ಆರಂಭವಾಗಿದ್ದು, 42 ಓವರ್'ಗಳಿಗೆ ಸೀಮಿತಗೊಳಿಸಲಾಗಿದೆ.  

ಲಂಡನ್(ಜು.20): ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಸ್ಫೋಟಕ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಾಸ್ ಗೆದ್ದ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮಿಥಾಲಿ ರಾಜ್, ಕಳೆದ ಪಂದ್ಯದಲ್ಲಿ ಆಡಿದ ತಂಡದೊಂದಿಗೆ ಕಣಕ್ಕಿಳಿದಿದೆ. ಮೊದಲ ಓವರ್'ನ ಕೊನೆಯ ಎಸೆತದಲ್ಲಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ 6 ರನ್ ಗಳಿಸಿ ಸ್ಕಚಟ್'ಗೆ ವಿಕೆಟ್ ಒಪ್ಪಿಸಿದ್ದಾರೆ.

ಮಂದಾನ ವಿಕೆಟ್ ಒಪ್ಪಿಸಿದ್ದು ಹೀಗೆ...

ಎರಡನೇ ವಿಕೆಟ್'ಗೆ ಪೂನಮ್ ರಾವತ್ ಹಾಗೂ ಮಿಥಾಲಿ ರಾಜ್ ಮಂದಗತಿಯಲ್ಲಿ ರನ್ ಕಲೆಹಾಕುತ್ತಿದ್ದು 9 ಓವರ್ ಮುಕ್ತಾಯಕ್ಕೆ ಭಾರತದ ವನಿತೆಯರ ತಂಡ 35ರನ್ ಕಲೆಹಾಕಿದೆ.

ಮಳೆಯ ಕಾರಣ ಎರಡನೇ ಸೆಮಿಫೈನಲ್ ಪಂದ್ಯ ತಡವಾಗಿ ಆರಂಭವಾಗಿದ್ದು, 42 ಓವರ್'ಗಳಿಗೆ ಸೀಮಿತಗೊಳಿಸಲಾಗಿದೆ.