ಮಲೇಷ್ಯಾ ಮಾಸ್ಟರ್ಸ್: ಸೆಮೀಸ್‌ಗೆ ಸೈನಾ, ಶ್ರೀಕಾಂತ್ ಔಟ್
ಮಾಜಿ ವಿಶ್ವ ಚಾಂಪಿಯನ್ ಜಪಾನಿನ ನೊಜೊಮಿ ಒಕುಹಾರ ವಿರುದ್ಧ 21-18, 23-21 ನೇರ ಗೇಮ್‌ಗಳಿಂದ ಗೆದ್ದು ಅಂತಿಮ 4ರ ಘಟ್ಟಕ್ಕೆ ಲಗ್ಗೆ ಇಟ್ಟರು. ಸೈನಾ, ಸೆಮಿಫೈನಲ್‌ನಲ್ಲಿ 3 ಬಾರಿ ವಿಶ್ವ ಚಾಂಪಿಯನ್ ಸ್ಪೇನ್‌ನ ಕ್ಯಾರೋಲಿನಾ ಮರಿನ್ ವಿರುದ್ಧ ಸೆಣಸಲಿದ್ದಾರೆ.
ಕೌಲಾಲಂಪುರ(ಜ.19): ಭಾರತದ ತಾರಾ ಶಟ್ಲರ್ ಸೈನಾ ನೆಹ್ವಾಲ್, ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೆಮಿಪೈನಲ್‌ಗೇರಿದ್ದಾರೆ. ಇದೇ ವೇಳೆ ಕಿದಂಬಿ ಶ್ರೀಕಾಂತ್ ಸೋತು ಹೊರಬಿದ್ದಿದ್ದಾರೆ.
ಶುಕ್ರವಾರ ನಡೆದ ಮಹಿಳಾ ಸಿಂಗಲ್ಸ್‌ನ ರೋಚಕ ಕ್ವಾರ್ಟರ್ ಫೈನಲ್‌ನಲ್ಲಿ ಸೈನಾ, ಮಾಜಿ ವಿಶ್ವ ಚಾಂಪಿಯನ್ ಜಪಾನಿನ ನೊಜೊಮಿ ಒಕುಹಾರ ವಿರುದ್ಧ 21-18, 23-21 ನೇರ ಗೇಮ್‌ಗಳಿಂದ ಗೆದ್ದು ಅಂತಿಮ 4ರ ಘಟ್ಟಕ್ಕೆ ಲಗ್ಗೆ ಇಟ್ಟರು. ಸೈನಾ, ಸೆಮಿಫೈನಲ್‌ನಲ್ಲಿ 3 ಬಾರಿ ವಿಶ್ವ ಚಾಂಪಿಯನ್ ಸ್ಪೇನ್‌ನ ಕ್ಯಾರೋಲಿನಾ ಮರಿನ್ ವಿರುದ್ಧ ಸೆಣಸಲಿದ್ದಾರೆ.
28 ವರ್ಷದ ಸೈನಾ 2017ರ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು, ಇನ್ನೂ 2011ರಲ್ಲಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.
ಪುರುಷರ ಸಿಂಗಲ್ಸ್‌ನ ಕ್ವಾರ್ಟರ್‌ನಲ್ಲಿ ಶ್ರೀಕಾಂತ್, ಕೊರಿಯಾದ ಸೊನ್ ವಾನ್ ಹೋ ವಿರುದ್ಧ 23-21, 16-21, 17-21 ಗೇಮ್‌ಗಳಲ್ಲಿ ಪರಾಭವಗೊಂಡರು.