ಕೊಲಂಬೊ(ಸೆ.30): ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಕುಮಾರ ಸಂಗಾಕ್ಕಾರ ಮತ್ತು ಮಹೇಲ ಜಯವರ್ಧನೆ ಅವರನ್ನು ಲಂಕಾ ಕ್ರಿಕೆಟ್ ಮಂಡಳಿಯ ಉನ್ನತ ಅಧಿಕಾರಿಗಳ ಸಮಿತಿಯಲ್ಲಿ ನೇಮಕ ಮಾಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಲಂಕಾ ಕ್ರಿಕೆಟ್ ತಂಡ ಕಳಪೆ ಪ್ರದರ್ಶನದಿಂದ ಕಂಗೆಟ್ಟಿರುವುದರಿಂದ ಈ ಇಬ್ಬರೂ ಮಾಜಿ ಆಟಗಾರರನ್ನು ಕ್ರಿಕೆಟ್ ಮಂಡಳಿಯಲ್ಲಿ ನೇಮಕ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಕೆಲ ದಿನಗಳ ಹಿಂದಷ್ಟೇ ಶ್ರೀಲಂಕಾ ತಂಡ 0-9 ರಿಂದ ಭಾರತ ವಿರುದ್ಧದ ಸರಣಿಯಲ್ಲಿ ವೈಟ್ ವಾಶ್ ಆಗಿತ್ತು. ಇದು ಲಂಕಾ ಕ್ರಿಕೆಟ್ ಮಂಡಳಿಗೆ ಸಾಕಷ್ಟು ಅವಮಾನ ತರಿಸಿತ್ತು.

ಸಂಗಾಕ್ಕಾರ ಮತ್ತು ಜಯವರ್ಧನೆ ಅವರನ್ನು ಮಾಜಿ ಆಟಗಾರರಾಗಿರುವ ಅರವಿಂದ ಡಿಸಿಲ್ವಾ ಮತ್ತು ಹೊಂಕೊ ಹೆಮಕಾ ಅಮರಾಸೂರಿಯಾ ಅವರಿರುವ ಸಮಿತಿಗೆ ನೇಮಕ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.