ಜಯವರ್ಧನೆ ಹಾಗೂ ಸಂಗಕ್ಕರ ವಿದಾಯದ ಬಳಿಕ ಲಂಕಾ ತಂಡವು ಸತತವಾಗಿ ಉತ್ತಮವಾಗಿ ಆಟವಾಡಲು ವಿಫಲವಾಗಿದೆ.

ಕೊಲಂಬೊ(ಜೂ.26): ಮಾಜಿ ಕ್ರಿಕೆಟಿಗ ಮಹೇಲ ಜಯವರ್ಧನೆ ಶ್ರೀಲಂಕಾ ತಂಡದ ಪ್ರಮುಖ ಕೋಚ್ ಆಗುವಷ್ಟು ಅನುಭವ ಹೊಂದಿಲ್ಲ ಎಂದು ಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ತಿಲಂಗಾ ಸುಮತಿಪಾಲ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲ ದಿನಗಳ ಹಿಂದಷ್ಟೇ ಶ್ರೀಲಂಕಾ ತಂಡದ ಹಿಂದಿನ ಕೋಚ್ ಗ್ರಾಹಂ ಫೋರ್ಡ್ ತಮ್ಮ ಸ್ಥಾನವನ್ನು ತೊರೆದಿದ್ದರು. ಮಹೇಲ, ಟಿ20 ತಂಡದ ಬ್ಯಾಟಿಂಗ್ ಅಥವಾ ಫೀಲ್ಡಿಂಗ್ ಕೋಚ್ ಆಗಬಹುದು ಎಂದು ಸುಮತಿಪಾಲ ಸ್ಥಳೀಯ ನೇತ್ ಎಫ್‌'ಎಂ ರೇಡಿಯೋದಲ್ಲಿ ಹೇಳಿದ್ದರು.

ಮುಂಬೈ ಇಂಡಿಯನ್ಸ್ ಕೋಚ್ ಮತ್ತು ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲ ತಂಡದಲ್ಲಿ ಆಡುವ ವೇಳೆಯಲ್ಲಿನ ಸಮಕಾಲೀನ ಆಟಗಾರರು ಈಗಲೂ ರಾಷ್ಟ್ರೀಯ ತಂಡದಲ್ಲಿ ಆಡುತ್ತಿದ್ದಾರೆ. ಮಹೇಲ 2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು.

ಜಯವರ್ಧನೆ ಹಾಗೂ ಸಂಗಕ್ಕರ ವಿದಾಯದ ಬಳಿಕ ಲಂಕಾ ತಂಡವು ಸತತವಾಗಿ ಉತ್ತಮವಾಗಿ ಆಟವಾಡಲು ವಿಫಲವಾಗಿದೆ.