ಮ್ಯಾಗ್ನಸ್‌-ಇಯಾನ್‌ ಜಂಟಿ ಚಾಂಪಿಯನ್‌: ಚೆಸ್‌ ಇತಿಹಾಸದಲ್ಲೇ ಹೊಸ ಅಧ್ಯಾಯ!

ವಿಶ್ವ ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಮ್ಯಾಗ್ನಸ್‌ ಕಾರ್ಲ್‌ಸನ್‌ ಹಾಗೂ ಇಯಾನ್‌ ನೆಪೋಮ್ನಿಯಾಚಿ ಜಂಟಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಸಡನ್‌ ಡೆತ್‌ನಲ್ಲೂ ಫಲಿತಾಂಶ ಬರದ ಹಿನ್ನೆಲೆಯಲ್ಲಿ ಇಬ್ಬರೂ ಪ್ರಶಸ್ತಿ ಹಂಚಿಕೊಂಡರು. ಇದೇ ವೇಳೆ ಇಬ್ಬರ ವಿರುದ್ಧ ಫಿಕ್ಸಿಂಗ್‌ ಆರೋಪ ಕೇಳಿಬಂದಿದೆ.

Magnus Carlsen Nepomniachtchi share World Blitz crown kvn

ನ್ಯೂಯಾರ್ಕ್‌: ಚೆಸ್ ಇತಿಹಾಸದಲ್ಲೇ ಅಪರೂಪದ ಕ್ಷಣಕ್ಕೆ ಈ ಬಾರಿ ವಿಶ್ವ ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ಶಿಪ್‌ ಸಾಕ್ಷಿಯಾಗಿದೆ. 5 ಬಾರಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲ್‌ಸನ್‌ ಹಾಗೂ ರಷ್ಯಾದ ಇಯಾನ್‌ ನೆಪೋಮ್ನಿಯಾಚಿ ಈ ಬಾರಿ ಬ್ಲಿಟ್ಜ್‌ ಕೂಟದಲ್ಲಿ ಜಂಟಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಈ ರೀತಿ ಇಬ್ಬರು ಪ್ರಶಸ್ತಿ ಹಂಚಿಕೊಂಡಿದ್ದು ಚೆಸ್‌ ಇತಿಹಾಸದಲ್ಲಿ ಇದೇ ಮೊದಲು.

ಬುಧವಾರ ಜಿದ್ದಾಜಿದ್ದಿನಿಂದ ನಡೆದ ಫೈನಲ್‌ ಪಂದ್ಯದಲ್ಲಿ ನಾರ್ವೆ ಹಾಗೂ ರಷ್ಯಾದ ಆಟಗಾರರ ತಲಾ 2-2 ಅಂಕಗಳೊಂದಿಗೆ ಸಮಬಲ ಸಾಧಿಸಿದರು. ಹೀಗಾಗಿ ಫಲಿತಾಂಶ ನಿರ್ಧರಿಸಲು ‘ಸಡನ್‌ ಡೆತ್‌’ ಮೊರೆ ಹೋಗಲಾಯಿತು. ಆದರೆ 3 ಬಾರಿ ಸಡನ್‌ ಡೆತ್‌ ನಡೆಸಿದರೂ ಪಂದ್ಯಗಳು ಟೈ ಆದವು. ಹೀಗಾಗಿ ಇಬ್ಬರೂ ಸ್ಪರ್ಧಿಗಳು ಪ್ರಶಸ್ತಿ ಹಂಚಿಕೊಳ್ಳಲು ನಿರ್ಧರಿಸಿದರು. ‘ದಿನವಿಡೀ ಹೋರಾಡಿದೆವು. ಫಲಿತಾಂಶ ಬರಲಿಲ್ಲ. ಪಂದ್ಯ ಮುಗಿಸಲು ಇದಕ್ಕಿಂತ ಬೇರೆ ಮಾರ್ಗವಿರಲಿಲ್ಲ’ ಎಂದು ಪಂದ್ಯದ ಬಳಿಕ ಮ್ಯಾಗ್ನಸ್‌ ಪ್ರತಿಕ್ರಿಯಿಸಿದ್ದಾರೆ.

2025ರ 25 ಪ್ರಮುಖ ಕ್ರೀಡೆಗಳ ಮುನ್ನೋಟ; ಹೊಸ ವರ್ಷದಲ್ಲೂ ಕ್ರೀಡಾಪ್ರೇಮಿಗಳಿಗೆ ಭರ್ಜರಿ ಮನರಂಜನೆ

ಫಿಕ್ಸಿಂಗ್ ಆರೋಪ!

ಪ್ರಶಸ್ತಿ ಹಂಚಿಕೊಳ್ಳಲು ನಿರ್ಧರಿಸಿದ ಬೆನ್ನಲ್ಲೇ ಇಬ್ಬರ ವಿರುದ್ಧ ಫಿಕ್ಸಿಂಗ್‌ ಆರೋಪ ಕೇಳಿಬಂದಿದೆ. ಫೈನಲ್‌ ವೇಳೆ ವೇದಿಕೆ ಬದಿಯಲ್ಲಿ ಮ್ಯಾಗ್ನಸ್‌-ಇಯಾನ್‌ ಮುಖಾಮುಖಿಯಾಗಿದ್ದಾರೆ. ಈ ವೇಳೆ ಮ್ಯಾಗ್ನಸ್‌, ‘ಅವರು(ಫಿಡೆ) ನಿರಾಕರಿಸಿದರೆ, ಬಿಟ್ಟು ಕೊಡುವವರೆಗೂ ನಾವು ಪಂದ್ಯ ಡ್ರಾ ಮಾಡೋಣ’ ಎಂದು ಹೇಳಿದ್ದಾರೆ. ಇಬ್ಬರೂ ಉದ್ದೇಶಪೂರ್ವಕವಾಗಿ ಪಂದ್ಯಗಳನ್ನು ಡ್ರಾ ಮಾಡಿಕೊಳ್ಳಲು ಮೊದಲೇ ತಂತ್ರ ಹೂಡಿದ್ದರು ಎಂದು ಹಲವರು ಆರೋಪಿಸಿದ್ದಾರೆ. ಇನ್ನ, ಅಮೆರಿಕದ ಗ್ರ್ಯಾಂಡ್‌ಮಾಸ್ಟರ್‌ ಹ್ಯಾನ್ಸ್‌ ನೀಮನ್‌ ಅವರು ಫಿಡೆ ನಿರ್ಧಾರವನ್ನು ಟೀಕಿಸಿದ್ದು, ವಿಶ್ವ ಚೆಸ್‌ ಎಂಬುದು ಈಗ ಜೋಕ್‌ ಆಗಿದೆ ಎಂದಿದ್ದಾರೆ.

ವಿಶ್ವ ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ಶಿಪ್‌: ಕಂಚು ಗೆದ್ದ ಭಾರತದ ಆರ್‌.ವೈಶಾಲಿ

ನ್ಯೂಯಾರ್ಕ್: ಇಲ್ಲಿ ನಡೆಯುತ್ತಿರುವ ವಿಶ್ವ ಬ್ಲಿಟ್ಜ್‌ ಚೆಸ್‌ ಚಾಂಪಿಯನ್‌ಶಿಪ್‌ನ ಮಹಿಳೆಯರ ವಿಭಾಗದಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್‌ ಆರ್‌.ವೈಶಾಲಿ ಕಂಚಿನ ಪದಕ ಗೆದ್ದುಕೊಂಡರು.

ಬುಧವಾರ ವೈಶಾಲಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಚೀನಾದ ಝ ಜಿನರ್‌ ಅವರನ್ನು 2.5-1.5 ಅಂಕಗಳಿಂದ ಸೋಲಿಸಿ ಸೆಮೀಸ್ ಪ್ರವೇಶಿಸಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಚೀನಾದ ಆಟಗಾರ್ತಿ ಜು ವೆನ್‌ಜುನ್ ಎದುರು 0.5-2.5 ಅಂಕಗಳಿಂದ ಪರಾಭವಗೊಂಡರು. ಬಳಿಕ ವೆನ್‌ಜುನ್‌ ತಮ್ಮ ದೇಶದವರೇ ಆದ ಲೀ ಟಿಂಗ್‌ಜೀ ವಿರುದ್ಧ ಗೆದ್ದು ಚಾಂಪಿಯನ್‌ ಎನಿಸಿಕೊಂಡರು.

2024ರ ಶ್ರೇಷ್ಠ ತಂಡವನ್ನು ಪ್ರಕಟಿಸಿದ ಆಸ್ಟ್ರೇಲಿಯಾ; ಟೀಂ ಇಂಡಿಯಾ ವೇಗಿಗೆ ನಾಯಕ ಪಟ್ಟ!

ಐದು ಬಾರಿ ವಿಶ್ವ ಚಾಂಪಿಯನ್, ಫಿಡೆ ಉಪಾಧ್ಯಕ್ಷ ವಿಶ್ವನಾಥನ್ ಆನಂದ್‌ ಅವರು ವೈಶಾಲಿಯ ಸಾಧನೆಯನ್ನು ಶ್ಲಾಘಿಸಿದ್ದಾರೆ. ‘ಕಂಚಿನ ಪದಕ ಪಡೆದ ವೈಶಾಲಿಗೆ ಅಭಿನಂದನೆಗಳು. ಅವರ ಕ್ವಾಲಿಫೈರ್‌ ಪಂದ್ಯ ನಿಜವಾಗಿಯು ಉತ್ತಮ ಅದ್ಭುತವಾಗಿತ್ತು. ನಮ್ಮ ವಾಕಾ ಚೆಸ್‌ ಮೆಂಟೀ(ವೆಸ್ಟ್‌ಬ್ರಿಡ್ಜ್ ಆನಂದ್‌ ಚೆಸ್‌ ಅಕಾಡೆಮಿ) ಹೆಮ್ಮೆ ತಂದಿದೆ’ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

Latest Videos
Follow Us:
Download App:
  • android
  • ios