ಈ ವರೆಗೂ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ರಶೀದ್ ತಾವೆಸೆದ ಮೊದಲ ಓವರ್‌ನಲ್ಲೇ ವಿಕೆಟ್ ಕಬಳಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಕೋಲ್ಕತಾ(ಏ.15): ಸನ್‌'ರೈಸರ್ಸ್‌ ಹೈದರಾಬಾದ್‌'ನ ಲೆಗ್ ಸ್ಪಿನ್ನರ್ ಆಫ್ಘಾನಿಸ್ತಾನದ ರಶೀದ್ ಖಾನ್ ಐಪಿಎಲ್‌'ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವರೆಗೂ ಆಡಿರುವ ನಾಲ್ಕೂ ಪಂದ್ಯಗಳಲ್ಲಿ ರಶೀದ್ ತಾವೆಸೆದ ಮೊದಲ ಓವರ್‌ನಲ್ಲೇ ವಿಕೆಟ್ ಕಬಳಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಆರ್‌'ಸಿಬಿ ವಿರುದ್ಧ ಮೊದಲ ಪಂದ್ಯದಲ್ಲಿ ಮನ್‌'ದೀಪ್ ಸಿಂಗ್ ವಿಕೆಟ್ ಪಡೆದಿದ್ದ ರಶೀದ್, 2ನೇ ಪಂದ್ಯದಲ್ಲಿ ಗುಜರಾತ್ ಲಯನ್ಸ್‌ನ ಅಪಾಯಕಾರಿ ಬ್ಯಾಟ್ಸ್‌ಮನ್ ಬ್ರೆಂಡನ್ ಮೆಕ್ಕಲಂ ಅವರನ್ನು ಪೆವಿಲಿಯನ್‌'ಗಟ್ಟಿದ್ದರು. ಮುಂಬೈ ವಿರುದ್ಧದ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರನ್ನು ಔಟ್ ಮಾಡಿದ್ದ ರಶೀದ್, ಇಂದು ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ಸಾರಥಿ ಗೌತಮ್ ಗಂಭೀರ್ ಅವರನ್ನು ಬಲಿಪಡೆದು, ತಮ್ಮ ವಿಭಿನ್ನ ದಾಖಲೆಯನ್ನು ಮುಂದುವರಿಸಿದರು.

ಇಲ್ಲಿಯವರೆಗೆ 4 ಪಂದ್ಯಗಳಿಂದ ರಶೀದ್ ಒಟ್ಟು 7 ವಿಕೆಟ್ ಕಬಳಿಸಿದ್ದಾರೆ.