ಈಗಾಗಲೇ ವೇಗಿ ಮಿಚೆಲ್‌ ಸ್ಟಾರ್ಕ್ ಹಾಗೂ ಆಲ್‌'ರೌಂಡರ್‌ ಮಿಚೆಲ್‌ ಮಾರ್ಷ್ ಈಗಾಗಲೇ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದಲೇ ಹೊರಬಿದ್ದಿದ್ದಾರೆ. 

ರಾಂಚಿ(ಮಾ.14): ಇತ್ತೀಚಿನ ದಿನಗಳಲ್ಲಿ ಆಸ್ಟ್ರೇಲಿಯಾ ಬೌಲರ್'ಗಳ ಗ್ರಹಗತಿಗಳು ಸರಿಯಾಗಿ ಇರುವಂತೆ ಕಾಣುತ್ತಿಲ್ಲ. ಮೂರನೇ ಟೆಸ್ಟ್‌ಗೂ ಮುನ್ನ ಆಸ್ಪ್ರೇಲಿಯಾಗೆ ಭಾರೀ ಹಿನ್ನಡೆಯಾಗಿದೆ. ತಂಡದ ಪ್ರಮುಖ ಸ್ಪಿನ್‌ ಬೌಲಿಂಗ್‌ ಅಸ್ತ್ರವೆನಿಸಿರುವ ಆಫ್‌ ಸ್ಪಿನ್ನರ್‌ ನಾಥನ್‌ ಲಿಯಾನ್‌ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದು, ತಂಡದ ಆತಂಕ ಹೆಚ್ಚಿಸಿದೆ. ಈಗಾಗಲೇ ವೇಗಿ ಮಿಚೆಲ್‌ ಸ್ಟಾರ್ಕ್ ಹಾಗೂ ಆಲ್‌'ರೌಂಡರ್‌ ಮಿಚೆಲ್‌ ಮಾರ್ಷ್ ಈಗಾಗಲೇ ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದಲೇ ಹೊರಬಿದ್ದಿದ್ದಾರೆ. 

ಬೆಂಗಳೂರು ಟೆಸ್ಟ್‌ನಲ್ಲಿ ಬೌಲಿಂಗ್‌ ವೇಳೆ ಬಲಗೈನ ತೋರು ಬೆರಳಿನ ಚರ್ಮ ಕಿತ್ತು ಹೋಗಿತ್ತು. ಇದೀಗ ಆ ಗಾಯ ಚೆಂಡನ್ನು ಹಿಡಿದುಕೊಳ್ಳಲು ಸಾಧ್ಯವಾಗದ ಹಾಗೆ ವ್ಯಾಪಿಸಿದೆ ಎಂದು ಲಿಯಾನ್‌ ಹೇಳಿದ್ದರು. ಆದರೂ ಗುರುವಾರದಿಂದ ರಾಂಚಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ನಲ್ಲಿ ತಂಡದಲ್ಲಿ ಆಡುವ ವಿಶ್ವಾಸವಿದೆ ಎಂದಿದ್ದಾರೆ ಲಿಯಾನ್‌.

2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 50 ರನ್‌'ಗೆ 8 ವಿಕೆಟ್‌ ಪಡೆದಿದ್ದ ಲಿಯಾನ್‌, 2ನೇ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್‌ ಪಡೆದಿರಲಿಲ್ಲ.

ಒಂದು ವೇಳೆ ಗಾಯದ ಪ್ರಮಾಣ ಹೆಚ್ಚಾದಲ್ಲಿ ಲಿಯಾನ್‌ ಮೂರನೇ ಟೆಸ್ಟ್‌ನಿಂದ ಹೊರಗುಳಿಯುವ ಸಾಧ್ಯತೆಗಳಿವೆ.