ಕ್ರಿಸ್ ಲಿನ್ ಅನುಪಸ್ಥಿತಿಯಲ್ಲಿ ಕೆಕೆಆರ್ ತಂಡವು ಸುನಿಲ್ ನರೈನ್ ಅವರನ್ನು ಆರಂಭಿಕನನ್ನಾಗಿ ಬಳಸಿಕೊಳ್ಳಲಾಗುತ್ತಿದೆ.

ಕೋಲ್ಕತಾ(ಮೇ.03): ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕ್ಷೇತ್ರರಕ್ಷಣೆ ವೇಳೆ ಎಡಭುಜದ ಗಾಯಕ್ಕೊಳ​ಗಾಗಿದ್ದ ಕೆಕೆಆರ್‌'ನ ಸ್ಫೋ​ಟಕ ಬ್ಯಾಟ್ಸ್‌ ಮನ್‌ ಕ್ರಿಸ್‌ಲಿನ್‌ ಐಪಿಎಲ್‌'ನಿಂದ ಹೊರಬಿದ್ದಿ​ದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಪ್ರಕಟ​ವಾಗಿತ್ತು.

ಕೆಕೆಆರ್‌ನ ಮುಖ್ಯ ಕಾರ್ಯ​ನಿರ್ವಾಹಕ ಅಧಿಕಾರಿ ವೆಂಕಿ ಮೈಸೂರು ಸಹ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಆದರೀಗ ತಾನು ಗಾಯದಿಂದ ಇದೀಗ ತಾನೆ ಚೇತರಿಸಿಕೊಳ್ಳುತ್ತಿದ್ದು ಮೇ 9ರಂದು ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

ಆರಂಭಿಕನಾಗಿ ಕ್ರಿಸ್ ಲಿನ್ ಐಪಿಎಲ್'ನ್ನು ಭರ್ಜರಿ ಬ್ಯಾಟಿಂಗ್ ಮೂಲಕ ಕೆಕೆಆರ್ ಅಭಿಮಾನಿಗಳನ್ನು ರಂಜಿಸಿದ್ದರು. ಗುಜರಾತ್ ಲಯನ್ಸ್ ಎದುರು ಕೇವಲ 41 ಎಸೆತಗಳಲ್ಲಿ 93ರನ್ ಸಿಡಿಸಿದ್ದರೆ, ಮುಂಬೈ ಇಂಡಿಯನ್ಸ್ ಎದುರು 32ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದರು. ಕ್ರಿಸ್ ಲಿನ್ ಅನುಪಸ್ಥಿತಿಯಲ್ಲಿ ಕೆಕೆಆರ್ ತಂಡವು ಸುನಿಲ್ ನರೈನ್ ಅವರನ್ನು ಆರಂಭಿಕನನ್ನಾಗಿ ಬಳಸಿಕೊಳ್ಳಲಾಗುತ್ತಿದೆ.