ಮತ್ತೆ ಧೋನಿ ಜತೆ ಆಡಲು ಕಾತರನಾಗಿದ್ದೇನೆ: ಭಜ್ಜಿ

First Published 22, Feb 2018, 11:58 PM IST
Looking forward to playing with Dhoni again Harbhajan Singh
Highlights

ಮುಂಬೈ ಇಂಡಿಯನ್ಸ್ ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಭಜ್ಜಿ ಪ್ರಮುಖ ಪಾತ್ರವಹಿಸಿದ್ದರು. ಹರ್ಭಜನ್ ಸಿಂಗ್ ನೇತೃತ್ವದಲ್ಲಿ 2011ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

ನವದೆಹಲಿ(ಫೆ.22): ಮಹೇಂದ್ರ ಸಿಂಗ್ ಧೋನಿ ಜತೆ ಮತ್ತೆ ಆಡಲು ಅವಕಾಶ ಲಭ್ಯವಾಗಿರುವುದು ಸಂತಸವನ್ನುಂಟು ಮಾಡಿದ್ದು, ಅವರ ಜತೆ ಆಡಲು ಕಾತುರನಾಗಿದ್ದೇನೆ ಎಂದು ಆಫ್‌'ಸ್ಪಿನ್ನರ್ ಹರ್ಭಜನ್ ಸಿಂಗ್ ತಿಳಿಸಿದ್ದಾರೆ.

2008ರ ಐಪಿಎಲ್‌'ನಿಂದಲೂ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದ ಭಜ್ಜಿ, ಈ ಬಾರಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌'ಕೆ) ಪಾಲಾಗಿದ್ದಾರೆ. ಭಜ್ಜಿ, ‘ವಿಶ್ವಕಪ್ ವೇಳೆ ನಾಯಕ ಧೋನಿ ಸೂಕ್ತ ಸಲಹೆಗಳನ್ನು ನೀಡಿದ್ದರು. ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಧೋನಿ ನೇತೃತ್ವದಲ್ಲಿ ಮತ್ತೆ ಆಡುವ ಅವಕಾಶ ಲಭಿಸಿದೆ. ಸಿಎಸ್‌'ಕೆಯನ್ನು ಮತ್ತೆ ಚಾಂಪಿಯನ್ ಪಟ್ಟಕ್ಕೇರಿಸುವುದು ನಮ್ಮ ಗುರಿ’ ಎಂದಿದ್ದಾರೆ.

ಮುಂಬೈ ಇಂಡಿಯನ್ಸ್ ಮೂರು ಬಾರಿ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಭಜ್ಜಿ ಪ್ರಮುಖ ಪಾತ್ರವಹಿಸಿದ್ದರು. ಹರ್ಭಜನ್ ಸಿಂಗ್ ನೇತೃತ್ವದಲ್ಲಿ 2011ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

loader