ಧೋನಿಯಲ್ಲಿ ಇನ್ನಷ್ಟು ಬಾಕಿಯಿದೆ. ವಿಕೆಟ್ ಕೀಪರ್ ಆಗಿ ಧೋನಿಗಿಂತ ಆಟಗಾರ ಮತ್ತೊಬ್ಬರಿಲ್ಲ. ಕಠಿಣ ಸಂದರ್ಭದಲ್ಲಿ ಟೀಂ ಇಂಡಿಯಾ ಧೋನಿ ಪರ ನಿಲ್ಲಬೇಕು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಕೋಲ್ಕತಾ(ನ.15): ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ಮತ್ತೊಮ್ಮೆ ಮಾಜಿ ನಾಯಕ ಎಂ.ಎಸ್. ಧೋನಿಯನ್ನು ಬೆಂಬಲಕ್ಕೆ ನಿಂತಿದ್ದಾರೆ.
ಭಾರತಕ್ಕೆ ಎರಡು ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಧೋನಿಯನ್ನು ಟೀಕಿಸುವವರು, ಮೊದಲು ತಮ್ಮ ವೃತ್ತಿ ಬದುಕನ್ನು ಒಮ್ಮೆ ಹಿಂದಿರುಗಿ ನೋಡಬೇಕು ಎಂದು ಶಾಸ್ತ್ರಿ ಚಾಟಿ ಬೀಸಿದ್ದಾರೆ. ಧೋನಿಯಲ್ಲಿ ಇನ್ನಷ್ಟು ಬಾಕಿಯಿದೆ. ವಿಕೆಟ್ ಕೀಪರ್ ಆಗಿ ಧೋನಿಗಿಂತ ಆಟಗಾರ ಮತ್ತೊಬ್ಬರಿಲ್ಲ. ಕಠಿಣ ಸಂದರ್ಭದಲ್ಲಿ ಟೀಂ ಇಂಡಿಯಾ ಧೋನಿ ಪರ ನಿಲ್ಲಬೇಕು ಎಂದು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗಷ್ಟೇ ವಿವಿಎಸ್ ಲಕ್ಷ್ಮಣ್, ಅಜಿತ್ ಅಗರ್ಕರ್ ಸೇರಿದಂತೆ ಇನ್ನೂ ಕೆಲ ಮಾಜಿ ಆಟಗಾರರು ಭಾರತ ಟಿ20 ತಂಡದಲ್ಲಿ ಧೋನಿ ಸ್ಥಾನವನ್ನು ಪ್ರಶ್ನಿಸಿದ್ದರು.
ಈ ಮೊದಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡಾ ಧೋನಿಗೆ ಬೆಂಬಲ ಸೂಚಿಸಿದ್ದರು. ಅಲ್ಲದೇ ಧೋನಿಯನ್ನು ಟೀಕಿಸುವುದು ಒಂದು ರೀತಿಯ ಫ್ಯಾಶನ್ ಆಗಿದೆ ಎಂದು ವ್ಯಂಗ್ಯವಾಡಿದ್ದರು.
