ಪಾನಿಪುರಿ ಮಾರುತ್ತಿದ್ದವ ಈಗ ಭಾರತ ಕ್ರಿಕೆಟಿಗ!

Lived In A Tent Sold Pani Puri Now Plays Cricket For India Under 19
Highlights

  • ಜೀವನಕ್ಕಾಗಿ ಪಾನಿಪುರಿ ಮಾಡಿಕೊಂಡು, ಮೈದಾನದಲ್ಲೇ ಟೆಂಟ್‌ ಹಾಕಿ ಮಲಗುತ್ತಿದ್ದ 17 ವರ್ಷದ  ಬಾಲಕ
  • ಭಾರತ ಅಂಡರ್‌-19 ಕ್ರಿಕೆಟ್‌ ತಂಡದಲ್ಲಿ ಸ್ಥಾನ; ಶ್ರೀಲಂಕಾ ಪ್ರವಾಸಕ್ಕೆ ಯಶಸ್ವಿ 

ಮುಂಬೈ: ಜೀವನಕ್ಕಾಗಿ ಪಾನಿಪುರಿ ಮಾಡಿಕೊಂಡು, ಮೈದಾನದಲ್ಲೇ ಟೆಂಟ್‌ ಹಾಕಿ ಮಲಗುತ್ತಿದ್ದ 17 ವರ್ಷದ ಉತ್ತರ ಪ್ರದೇಶ ಮೂಲದ, ಮುಂಬೈ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಭಾರತ ಅಂಡರ್‌-19 ಕ್ರಿಕೆಟ್‌ ತಂಡದಲ್ಲಿ ಸ್ಥಾನ ದೊರೆತಿದೆ.

ಶ್ರೀಲಂಕಾ ಪ್ರವಾಸಕ್ಕೆ ಯಶಸ್ವಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 12ನೇ ವಯಸ್ಸಿನಲ್ಲಿ ಕ್ರಿಕೆಟಿಗನಾಗುವ ಕನಸು ಹೊತ್ತು ತವರಿನಿಂದ ಮುಂಬೈಗೆ ಬಂದ ಜೈಸ್ವಾಲ್‌ಗೆ, ಉತ್ತರ ಪ್ರದೇಶದಿಂದಲೇ ವಲಸೆ ಬಂದು ಕೋಚ್‌ ಆಗಿರುವ ಜ್ವಾಲಾ ಸಿಂಗ್‌ ಎನ್ನುವವರು ನೆರವಾದರು.

ಅವರ ಮಾರ್ಗದರ್ಶನದಲ್ಲಿ ಬೆಳೆದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಯಶಸ್ವಿ, ಮುಂಬೈನ ವಿವಿಧ ದರ್ಜೆ ಕ್ರಿಕೆಟ್‌ ಟೂರ್ನಿಗಳಲ್ಲಿ ಕಳೆದ 5 ವರ್ಷದಲ್ಲಿ ಒಟ್ಟು 49 ಶತಕ ಬಾರಿಸಿದ್ದಾರೆ.

loader