ಟುರಿನ್(ಆ.08]: ಸ್ಪ್ಯಾನಿಶ್ ಲೀಗ್‌ನ ರಿಯಲ್ ಮ್ಯಾಡ್ರಿಡ್ ತೊರೆದು ಇಟಲಿಯ ಯುವೆಂಟುಸ್ ಫುಟ್ಬಾಲ್ ಕ್ಲಬ್‌ಗೆ ಸೇರ್ಪಡೆಗೊಂಡಿರುವ ಕ್ರಿಸ್ಟಿಯಾನೋ ರೊನಾಲ್ಡೋ, ಆ.18ರಂದು ಕ್ಲಬ್ ಪರ ಮೊದಲ ಪಂದ್ಯವನ್ನಾಡಲಿದ್ದಾರೆ. ಈ ಪಂದ್ಯ ಫೇಸ್‌ಬುಕ್‌ನಲ್ಲೂ ನೇರ ಪ್ರಸಾರಗೊಳ್ಳಲಿದೆ ಎಂದು ತಂಡ ತಿಳಿಸಿದೆ. 

ಇದನ್ನು ಓದಿ: ಫಿಫಾ ವಿಶ್ವಕಪ್ ಸೋಲಿನ ಬಳಿಕ ಮ್ಯಾಡ್ರಿಡ್ ತಂಡ ತೊರೆದ ರೋನಾಲ್ಡೋ

ವಿಶ್ವದಾದ್ಯಂತ ರೊನಾಲ್ಡೋ ಪಾದಾರ್ಪಣೆ ಪಂದ್ಯಕ್ಕೆ ಭಾರೀ ಬೇಡಿಕೆ ಇದ್ದು, ಈ ದೃಷ್ಟಿಯಿಂದ ಪ್ರಸಾರ ಹಕ್ಕು ಹೊಂದಿರುವ ವಾಹಿನಿ, ಫೇಸಬುಕ್‌ನೊಂದಿಗೆ ಪಂದ್ಯ ಪ್ರಸಾರಕ್ಕೆ ಒಪ್ಪಂದ ಮಾಡಿಕೊಂಡಿದೆ.

ಇದನ್ನು ಓದಿ: ಯುವೆಂಟಸ್ ಸೇರಿದ ಬಳಿಕ 20 ವರ್ಷದ ಯುವಕನಾದ ರೋನಾಲ್ಡೋ!

9 ವರ್ಷಗಳ ಕಾಲ ರಿಯಲ್ ಮ್ಯಾಡ್ರಿಡ್ ತಂಡವನ್ನು ಪ್ರತಿನಿಧಿಸಿದ್ದ ರೊನಾಲ್ಡೋ ಫಿಫಾ ವಿಶ್ವಕಪ್ ಮುಕ್ತಾಯದ ಬಳಿಕ ಯುವೆಂಟುಸ್ ಫುಟ್ಬಾಲ್ ಕ್ಲಬ್‌ ಸೇರಿಕೊಂಡಿದ್ದರು.