2007ರಿಂದ ಮೆಸ್ಸಿ ಮತ್ತು ಅಂಟೋನೆಲ್ಲ ಜತೆಯಾಗಿಯೇ ವಾಸವಿದ್ದು ಅವರಿಗೆ ಈಗಾಗಲೇ ಇಬ್ಬರು ಮಕ್ಕಳು ಇದ್ದಾರೆ.
ಲಂಡನ್(ಡಿ.16): ಅರ್ಜೆಂಟೀನಾದ ಸ್ಟಾರ್ ಫುಟ್ಬಾಲಿಗ ಲಯೋನೆಲ್ ಮೆಸ್ಸಿ ಮುಂದಿನ ವರ್ಷ ತಮ್ಮ ದೀರ್ಘಕಾಲದ ಗೆಳತಿ ಅಂಟೋನೆಲ್ಲ ರೊಕುಜ್ಜೊ ಅವರನ್ನು ವಿವಾಹವಾಗಲಿದ್ದಾರೆ ಎಂದು ಸ್ಪ್ಯಾನಿಶ್ ಮಾಧ್ಯಮವೊಂದು ವರದಿ ಮಾಡಿದೆ.
ಮೆಸ್ಸಿ ಅವರ ವೃತ್ತಿ ಬದುಕಿಗೆ ಅನುಗುಣವಾಗಿ ವಿವಾಹದ ಸ್ಥಳ ಮತ್ತು ದಿನಾಂಕವನ್ನು ಪ್ರಕಟಿಸಲಾಗುವುದು. 2017ರ ಬೇಸಿಗೆ ಅಥವಾ ಚಳಿಗಾಲದಲ್ಲಿ ಮದುವೆ ನಡೆಯುವ ಸಾಧ್ಯತೆಯಿದೆ ಎಂದು ಮರ್ಕಾ ಪತ್ರಿಕೆ ಸುದ್ದಿ ಪ್ರಕಟಿಸಿದೆ.
ಮದುವೆ ಮೆಸ್ಸಿ ಅವರ ತವರಾದ ಅರ್ಜೆಂಟೀನಾದಲ್ಲಿ ನಡೆಯುವ ಸಾಧ್ಯತೆ ಇರುವುದಾಗಿ ಪತ್ರಿಕೆ ಹೇಳಿದೆ.
2007ರಿಂದ ಮೆಸ್ಸಿ ಮತ್ತು ಅಂಟೋನೆಲ್ಲ ಜತೆಯಾಗಿಯೇ ವಾಸವಿದ್ದು ಅವರಿಗೆ ಈಗಾಗಲೇ ಇಬ್ಬರು ಮಕ್ಕಳು ಇದ್ದಾರೆ.
