2014ರ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯಲ್ಲಿ ಫೈನಲ್‌ವರೆಗೆ ಪಯಣಿಸಿದ್ದ ಅರ್ಜೆಂಟೀನಾ, ಈ ಬಾರಿಯ ಅರ್ಹತಾ ಸುತ್ತಿನಲ್ಲಿ ನಿರೀಕ್ಷಿತ ಯಶ ಕಾಣದಾಗಿದೆ.

ಬ್ರುನೋಸ್ ಐರಿಸ್(ಅ.22): ಗಾಯದ ಸಮಸ್ಯೆಯಿಂದಾಗಿ ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಪಂದ್ಯಾವಳಿಯ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ಅರ್ಜೆಂಟೀನಾ ಸ್ಟಾರ್ ಆಟಗಾರ ಲಯೊನೆಲ್ ಮೆಸ್ಸಿ, ಪುನಃ ತಂಡಕ್ಕೆ ವಾಪಸ್ಸಾಗಿದ್ದಾರೆ.

ನ. 11ರಂದು ನಡೆಯಲಿರುವ ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ ಅವರು ಕಣಕ್ಕಿಳಿಯಲಿದ್ದಾರೆ. 2014ರ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯಲ್ಲಿ ಫೈನಲ್‌ವರೆಗೆ ಪಯಣಿಸಿದ್ದ ಅರ್ಜೆಂಟೀನಾ, ಈ ಬಾರಿಯ ಅರ್ಹತಾ ಸುತ್ತಿನಲ್ಲಿ ನಿರೀಕ್ಷಿತ ಯಶ ಕಾಣದಾಗಿದೆ.

ಈವರೆಗೆ 10 ಪಂದ್ಯಗಳನ್ನಾಡಿ 4 ಗೆಲುವು, 2 ಸೋಲು, 4 ಡ್ರಾ ಸಾಧಿಸಿ ಅಂಕಪಟ್ಟಿಯ ಐದನೇ ಸ್ಥಾನದಲ್ಲಿದೆ. ಹಾಗಾಗಿ, ಬ್ರೆಜಿಲ್ ವಿರುದ್ಧದ ಪಂದ್ಯ ಮಹತ್ವ ಪಡೆದುಕೊಂಡಿದೆ.