ಆಯ್ದ ಪತ್ರಕರ್ತರು ವೋಟ್ ಮಾಡುವ ಮೂಲಕ ಬಲಾನ್ ಡಿ ಆರ್ ಪ್ರಶಸ್ತಿಯನ್ನು ಯಾವ ಆಟಗಾರನಿಗೆ ನೀಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಮೆಸ್ಸಿ ಫೀಫಾದ ವರ್ಷದ ಉತ್ತಮ ಆಟಗಾರ ಪ್ರಶಸ್ತಿ ಪಡೆಯುವ ಸಾಧ್ಯತೆಯಿದೆ.
ಲಂಡನ್(ನ.03): ವಿಶ್ವ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಅರ್ಜೆಂಟೀನಾದ ಫುಟ್ಬಾಲಿಗ ಲಯೋನೆಲ್ ಮೆಸ್ಸಿ ಹಿಂದಿಕ್ಕಲಿದ್ದು, ಫೀಫಾದ ಪ್ರತಿಷ್ಠಿತ ಪ್ರಶಸ್ತಿಯಾದ ಬಲಾನ್ ಡಿ ಆರ್ ಪ್ರಶಸ್ತಿಯನ್ನು ಪಡೆಯುವ ಸಾಧ್ಯತೆಯಿದೆ ಕ್ಯಾಟ್ಲನ್ ಡೈಲಿ ಡೈರಿಯೊ ಗೊಲ್ ಹೆಸರಿನ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.
ಆಯ್ದ ಪತ್ರಕರ್ತರು ವೋಟ್ ಮಾಡುವ ಮೂಲಕ ಬಲಾನ್ ಡಿ ಆರ್ ಪ್ರಶಸ್ತಿಯನ್ನು ಯಾವ ಆಟಗಾರನಿಗೆ ನೀಡಬೇಕು ಎನ್ನುವುದನ್ನು ನಿರ್ಧರಿಸಲಾಗುತ್ತದೆ. ಮೆಸ್ಸಿ ಫೀಫಾದ ವರ್ಷದ ಉತ್ತಮ ಆಟಗಾರ ಪ್ರಶಸ್ತಿ ಪಡೆಯುವ ಸಾಧ್ಯತೆಯಿದೆ.
ಅದರಂತೆ ರೊನಾಲ್ಡೊ ಕೂಡ ಈ ರೇಸ್‌ನಲ್ಲಿದ್ದಾರೆ. ಪ್ರಸಕ್ತ ವರ್ಷ ನಡೆದ ಚಾಂಪಿಯನ್ಸ್ ಲೀಗ್ ಮತ್ತು ಯುರೋ 2016ರ ಫುಟ್ಬಾಲ್ ಟೂರ್ನಿಯಲ್ಲಿ ರೊನಾಲ್ಡೊ ಅತ್ಯದ್ಭುತ ಪ್ರದರ್ಶನ ನೀಡಿದ್ದರು. ಈ ವರ್ಷದ ಆರಂಭದಲ್ಲಿ ರೊನಾಲ್ಡೊ, ಅತಿ ಹೆಚ್ಚು ಗೋಲುಗಳಿಸಿದ ಸಾಧನೆಯೊಂದಿಗೆ ಪ್ರತಿಷ್ಟಿತ ಎರಡು ಪ್ರಶಸ್ತಿ ಪಡೆದಿದ್ದರು. ಯುರೋ ಫುಟ್ಬಾಲ್ ನಂತರ ರೊನಾಲ್ಡೊ ಮಂಕಾಗಿದ್ದರು.