ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳ್ತಾರ ಲಿಯೋನಲ್ ಮೆಸ್ಸಿ?

Lionel Messi has already dropped retirement hint as Argentina crash out of World Cup
Highlights

ಫಿಫಾ ವಿಶ್ವಕಪ್ ಟೂರ್ನಿಯ ನಾಕೌಟ್ ಹಂತದಲ್ಲಿ ಸೋಲು ಅನುಭವಿಸಿದ ಲಿಯೋನಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಟೂರ್ನಿಯಿಂದ ಹೊರಬಿದ್ದಿದೆ. ಈ ಸೋಲು ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್ ಕರಿಯರ್‌ಗೆ ಪೂರ್ಣ ವಿರಾಮ ಹಾಕುತ್ತಾ? ಇಲ್ಲಿದೆ ವಿವರ.

ಕಜಾನ್‌(ಜು.01): ಫಿಫಾ ವಿಶ್ವಕಪ್ ಟೂರ್ನಿ ನಾಕೌಟ್ ಪಂದ್ಯದಲ್ಲಿ ಅರ್ಜೆಂಟೀನಾ ಸೋಲಿನಿಂದ ಅಭಿಮಾನಿಗಳು ಇನ್ನು ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ಮೆಸ್ಸಿ ಅಭಿಮಾನಿಗಳಿಗೆ ಮತ್ತೊಂದು ಆಘಾತ ಎದುರಾಗಿದೆ. ಸೋಲಿನಿಂದ ನಿರಾಸೆ ಅನುಭವಿಸಿರುವ ಅರ್ಜೆಂಟೀನಾ ನಾಯಕ ಲಿಯೋನಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದೆ.

 ಅರ್ಜೆಂಟೀನಾ ಕಳಪೆ ಪ್ರದರ್ಶನ ತೋರಿದರೆ ನಿವೃತ್ತಿ ಘೋಷಿಸುವುದಾಗಿ ಮೆಸ್ಸಿ ಈ ಮೊದಲೇ ಸೂಚನೆ ನೀಡಿದ್ದರು. ಈ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ನಾಯಕನಿಂದ ದಾಖಲಾಗಿದ್ದು ಏಕೈಕ ಗೋಲು ಮಾತ್ರ. 

4ನೇ ಫಿಫಾ ವಿಶ್ವಕಪ್ ಟೂರ್ನಿ ಆಡಿದ ಮೆಸ್ಸಿ 2006, 2010ರ ವಿಶ್ವಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌ನಿಂದ ನಿರ್ಗಮಿಸಿದ್ದ ಮೆಸ್ಸಿ, 2014ರಲ್ಲಿ ತಂಡವನ್ನು ರನ್ನರ್‌-ಅಪ್‌ ಸ್ಥಾನದ ವರೆಗೂ ಕೊಂಡೊಯ್ದಿದ್ದರು. 

2018ರಲ್ಲಿ ಫ್ರಾನ್ಸ್ ವಿರುದ್ಧದ ನಾಕೌಟ್ ಪಂದ್ಯದಲ್ಲಿ ಸೋಲು ಅನುಭವಿಸಿತು. ಈ ಮೂಲಕ ಟೂರ್ನಿಯಿಂದಲೇ ಹೊರಬಿತ್ತು. ಹೀಗಾಗಿ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳಿ, ಲೀಗ್ ಟೂರ್ನಿಗಳಲ್ಲಿ ಆಟ ಮುಂದುವರಿಸಲಿದ್ದಾರೆ ಅನ್ನೋ ಸುದ್ದಿ ಹಬ್ಬಿದೆ.   ಒಟ್ಟಾರೆ ವಿಶ್ವಕಪ್‌ನಲ್ಲಿ ಮೆಸ್ಸಿ 19 ಪಂದ್ಯಗಳಿಂದ 6 ಗೋಲು ದಾಖಲಿಸಿದ್ದಾರೆ.

loader