ಮೆಸ್ಸಿ ಬಾರ್ಸಿಲೋನಾ ಪರ ಒಟ್ಟು 583 ಪಂದ್ಯಗಳನ್ನು ಆಡಿದ್ದು, 507 ಗೋಲುಗಳನ್ನು ಬಾರಿಸಿದ್ದಾರೆ.

ಬಾರ್ಸಿಲೋನಾ(ಜು.05): ಫೋರ್ಚುಗಲ್‌'ನ ಫುಟ್ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ ಬಾರ್ಸಿಲೋನಾ ತಂಡದಲ್ಲೇ ಉಳಿಯಲಿದ್ದು, ಇತ್ತೀಚೆಗೆ ಎದ್ದಿದ್ದ ಬಾರ್ಸಿಲೋನಾ ತಂಡ ತೊರೆಯುತ್ತಾರೆಂಬ ಊಹಾಪೋಹಗಳಿಗೆ ತೆರೆ ಬಿದ್ದಿದೆ.

ಬಾರ್ಸಿಲೋನಾ ತಂಡದೊಂದಿಗೆ ಮೆಸ್ಸಿ ನೂತನ ಒಪ್ಪಂದಕ್ಕೆ ಮೆಸ್ಸಿ ಸಹಮತ ಸೂಚಿಸಿದ್ದು, 2021ರ ತನಕ ತಂಡದ ಪರ ಆಡಲಿದ್ದಾರೆ ಎಂದು ಬಾರ್ಸಿಲೋನಾ ತಂಡ ತಿಳಿಸಿದೆ.

ಮೂಲಗಳ ಪ್ರಕಾರ ನೂತನ ಒಪ್ಪಂದದಿಂದ ಮೆಸ್ಸಿ ಸುಮಾರು ₹2200 ಕೋಟಿ (೩೦೦ ಮಿಲಿಯನ್ ಯುರೋ) ರುಪಾಯಿಗಳನ್ನು ಪಡೆಯಲಿದ್ದಾರೆ ಎನ್ನಲಾಗಿದೆ.

ಬಾರ್ಸಿಲೋನಾದೊಂದಿಗೆ ಈ ಮೊದಲು ಮೆಸ್ಸಿ ಮಾಡಿಕೊಂಡಿದ್ದ ಒಪ್ಪಂದ 2018ಕ್ಕೆ ಮುಕ್ತಾಯಗೊಳ್ಳುತ್ತಿತ್ತು.

ಮೆಸ್ಸಿ ಬಾರ್ಸಿಲೋನಾ ಪರ ಒಟ್ಟು 583 ಪಂದ್ಯಗಳನ್ನು ಆಡಿದ್ದು, 507 ಗೋಲುಗಳನ್ನು ಬಾರಿಸಿದ್ದಾರೆ.