ದಿಗ್ಗಜ ಟೆನಿಸ್ ತಾರೆ ಮಾರ್ಟಿನಾ ನರ್ವಾಟಿಲೋವಾಗೆ ಕ್ಯಾನ್ಸರ್ ದೃಢಗಂಟಲು ಹಾಗೂ ಸ್ತನ ಕ್ಯಾನ್ಸರ್‌ಗೆ ತುತ್ತಾದ ಅಮೆರಿಕದ ಮಾಜಿ ಟೆನಿಸ್ ಆಟಗಾರ್ತಿಈ ಮೊದಲು 2010ರಲ್ಲೂ ಮಾರ್ಟಿನಾ ಸ್ತನ ಕ್ಯಾನ್ಸರ್‌ಗೆ ಒಳಗಾಗಿ ಗುಣಮುಖರಾಗಿದ್ದರು

ನ್ಯೂಯಾರ್ಕ್(ಜ.04): ದಿಗ್ಗಜ ಟೆನಿಸ್‌ ಆಟಗಾರ್ತಿ ಅಮೆರಿಕದ ಮಾರ್ಟಿನಾ ನರ್ವಾಟಿಲೋವಾ ಅವರು ಗಂಟಲು ಹಾಗೂ ಸ್ತನ ಕ್ಯಾನ್ಸರ್‌ಗೆ ತುತ್ತಾಗಿದ್ದು, ಶೀಘ್ರದಲ್ಲೇ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಕಳೆದ ನವೆಂಬರ್‌ನಲ್ಲಿ ಮಾರ್ಟಿನಾರಿಗೆ ಗಂಟಲಿನಲ್ಲಿ ಕ್ಯಾನ್ಸರ್‌ ಇರುವುದು ಕಂಡುಬಂದಿದ್ದು, ಮತ್ತಷ್ಟು ಪರೀಕ್ಷೆ ನಡೆಸಿದಾಗ ಸ್ತನ ಕ್ಯಾನ್ಸರ್‌ಗೂ ತುತ್ತಾಗಿದ್ದು ಪತ್ತೆಯಾಗಿದೆ. 

ಈ ಮೊದಲು 2010ರಲ್ಲೂ ಮಾರ್ಟಿನಾ ಸ್ತನ ಕ್ಯಾನ್ಸರ್‌ಗೆ ಒಳಗಾಗಿ, ಬಳಿಕ ಗುಣಮುಖರಾಗಿದ್ದರು. 18 ಸಿಂಗಲ್ಸ್‌, 31 ಮಹಿಳಾ ಡಬಲ್ಸ್‌, 10 ಮಿಶ್ರ ಡಬಲ್ಸ್‌ ಸೇರಿ ಬರೋಬ್ಬರಿ 59 ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಗೆದ್ದಿರುವ ನರ್ವಾಟಿಲೋವಾ 2006ರಲ್ಲಿ ಕೊನೆ ಬಾರಿ ಮಿಶ್ರ ಡಬಲ್ಸ್‌ ಚಾಂಪಿಯನ್‌ ಆಗಿದ್ದರು. 331 ವಾರಗಳ ಕಾಲ ವಿಶ್ವ ನಂ.1 ಸ್ಥಾನದಲ್ಲಿದ್ದ ಅವರು ದಾಖಲೆಯ 167 ಸಿಂಗಲ್ಸ್‌ ಪ್ರಶಸ್ತಿ ಗೆದ್ದಿದ್ದಾರೆ.

Scroll to load tweet…

ವಿಶ್ವ ಟಿಟಿ ರ‍್ಯಾಂಕಿಂಗ್‌‌: ಮನಿಕಾಗೆ 35ನೇ ಸ್ಥಾನ

ನವದೆಹಲಿ: ಭಾರತದ ತಾರಾ ಟೇಬಲ್‌ ಟೆನಿಸ್‌ ಪಟು ಮನಿಕಾ ಬಾತ್ರಾ ವಿಶ್ವ ರ‍್ಯಾಂಕಿಂಗ್‌‌ನಲ್ಲಿ ವೃತ್ತಿಬದುಕಿನ ಶ್ರೇಷ್ಠ 35ನೇ ಸ್ಥಾನಕ್ಕೇರಿದ್ದಾರೆ. ಕಳೆದ ವರ್ಷ ಏಷ್ಯನ್‌ ಕಪ್‌ ಸೇರಿದಂತೆ ಪ್ರಮುಖ ಟೂರ್ನಿಗಳಲ್ಲಿ ಮಿಂಚಿದ್ದ 27ರ ಮನಿಕಾ ಮಂಗಳವಾರ ಬಿಡುಗಡೆಗೊಂಡ ಮಹಿಳಾ ಸಿಂಗಲ್ಸ್‌ ರ‍್ಯಾಂಕಿಂಗ್‌‌ ಪಟ್ಟಿಯಲ್ಲಿ 3 ಸ್ಥಾನ ಪ್ರಗತಿ ಸಾಧಿಸಿ, 175 ಅಂಕಗಳನ್ನು ಸಂಪಾದಿಸಿದರು. ಪುರುಷರ ರ‍್ಯಾಂಕಿಂಗ್‌‌ನಲ್ಲಿ ಜಿ.ಸತ್ಯನ್‌ 39ನೇ ಸ್ಥಾನದಲ್ಲಿ ಮುಂದುವರಿದಿದ್ದು, ಶರತ್‌ ಕಮಾಲ್‌ 3 ಸ್ಥಾನ ಕುಸಿದು 47ನೇ ಸ್ಥಾನದಲ್ಲಿದ್ದಾರೆ.

ಪೀಲೆ ಅಂತಿಮ ದರ್ಶನಕ್ಕೆ ಜನಸಾಗರ

ಸ್ಯಾಂಟೊಸ್‌(ಬ್ರೆಜಿಲ್‌): ಕಳೆದ ಶುಕ್ರವಾರ ನಿಧನರಾದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್‌ ಅಟಗಾರರ ಬ್ರೆಜಿಲ್‌ನ ಪೀಲೆ ಮೃತದೇಹದ ಅಂತಿಮ ದರ್ಶನ ಸೋಮವಾರ ಆರಂಭವಾಗಿದ್ದು, ಮಂಗಳವಾರ ಅಂತ್ಯಕ್ರಿಯೆ ನಡೆಯಿತು. ಇಲ್ಲಿನ ಆಲ್ಬರ್ಚ್‌ ಐನ್‌ಸ್ಟಿನ್‌ ಆಸ್ಪತ್ರೆಯಲ್ಲಿ ಅಸುನೀಗಿದ ಪೀಲೆ ಅವರ ಪಾರ್ಥೀವ ಶರೀರವನ್ನು ಸೋಮವಾರ ಅವರ ಹುಟ್ಟೂರು ಸ್ಯಾಂಟೋಸ್‌ನಲ್ಲಿರುವ ವಿಲಾ ಬೆಲ್ಮಿರೊ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು. ಮುಂಜಾನೆಯಿಂದಲೇ ಕ್ರೀಡಾಂಗಣದ ಹೊರಗಡೆ ಅಪಾರ ಪ್ರಮಾಣದ ಅಭಿಮಾನಿಗಳು ನೆರೆದಿದ್ದು, ಮೃತದೇಹದ ಅಂತಿಮ ದರ್ಶನ ಪಡೆದರು. 

ವಿಶ್ವಕಪ್‌ ಪದಕ ಕಾಯಲು 20 ಲಕ್ಷದ ಶ್ವಾನ ಖರೀದಿ!

ಬ್ಯೂನಸ್‌ ಐರಿಸ್‌: ಫಿಫಾ ಫುಟ್ಬಾಲ್‌ ವಿಶ್ವಕಪ್‌ ಗೆದ್ದ ಅರ್ಜೆಂಟೀನಾ ತಂಡದಲ್ಲಿದ್ದ ಗೋಲ್‌ಕೀಪರ್‌ ಎಮಿಲಿಯಾನೋ ಮಾರ್ಟಿನೆಜ್‌ ತಮ್ಮ ವಿಶ್ವಕಪ್‌ ಪದಕ ಕಾಯಲು 20000 ಪೌಂಡ್‌(ಅಂದಾಜು 20 ಲಕ್ಷ ರು.) ಬೆಲೆ ಬಾಳುವ ಬೆಲ್ಜಿಯನ್‌ ಶೆಫರ್ಡ್‌ ಶ್ವಾನ ಖರೀದಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಬ್ರಿಟನ್‌ ಸೇನೆ, ಅಮೆರಿಕ ನೇವಿ ಸೀಲ್ಸ್‌ ಪಡೆಗಳು ಈ ತಳಿಯ ಶ್ವಾನಗಳನ್ನು ಕಾವಲಿಗೆ ಬಳಸುತ್ತಾರೆ.

Hockey World Cup: ಸವಾಲು ಸ್ವೀಕರಿಸಿ ಇತಿಹಾಸ ನಿರ್ಮಿಸಲು ಒಡಿಶಾ ರೆಡಿ

ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆ್ಯಸ್ಟನ್‌ ವಿಲ್ಲಾ ಕ್ಲಬ್‌ ಪರ ಆಡುವ ಮಾರ್ಟಿನೆಜ್‌, ವಿಶ್ವಕಪ್‌ ಗೆದ್ದ ಸಂಭ್ರಮಾಚರಣೆಯ ಬಳಿಕ ಕಳೆದ ವಾರ ತಂಡ ಕೂಡಿಕೊಂಡಿದ್ದಾರೆ. ಫ್ರಾನ್ಸ್‌ ವಿರುದ್ಧ ಫೈನಲ್‌ನಲ್ಲಿ ನಡೆದಿದ್ದ ಪೆನಾಲ್ಟಿಶೂಟೌಟ್‌ನಲ್ಲಿ ಮಾರ್ಟಿನೆಜ್‌ ಆಕರ್ಷಕ ಪ್ರದರ್ಶನ ತೋರಿದ್ದರು. ಟೂರ್ನಿಯ ಶ್ರೇಷ್ಠ ಗೋಲ್‌ಕೀಪರ್‌ ಆಗಿ ಹೊರಹೊಮ್ಮಿದ ಮಾರ್ಟಿನೆಜ್‌ಗೆ ಗೋಲ್ಡನ್‌ ಗ್ಲೌ ಟ್ರೋಫಿ ಸಹ ದೊರೆತಿತ್ತು.