ವಿರಾಟ್ ಕೊಹ್ಲಿ ಕಳೆದ 17 ತಿಂಗಳಲ್ಲಿ 6 ದ್ವಿಶತಕ ಸಿಡಿಸಿದ್ದಾರೆ. ಅಲ್ಲದೆ ಒಟ್ಟಾರೆ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ ಕೊಹ್ಲಿ 52 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.
ನವದೆಹಲಿ(ಡಿ.05): ಭರ್ಜರಿ ರನ್ ಬೇಟೆಯೊಂದಿಗೆ ದಾಖಲೆ ಮೇಲೆ ದಾಖಲೆಗಳನ್ನು ಬರೆಯುತ್ತಿರುವ ವಿರಾಟ್ ಕೊಹ್ಲಿ, ಟೆಸ್ಟ್ ಕ್ರಿಕೆಟ್'ನಲ್ಲಿ ಹೆಚ್ಚು ಕಾಲ ಕ್ರೀಸ್'ನಲ್ಲಿ ನೆಲೆಯೂರಲು ತಮಗೆ ಚೇತೇಶ್ವರ್ ಪೂಜಾರ ಸ್ಫೂರ್ತಿ ಎಂದಿದ್ದಾರೆ.
‘ಟೆಸ್ಟ್'ನಲ್ಲಿ ದೊಡ್ಡ ಮೊತ್ತ ದಾಖಲಿಸಬೇಕು ಎಂಬುದು ನನ್ನಾಸೆ. ಪೂಜಾರ ತಮ್ಮ ವೃತ್ತಿಬದುಕಿನಲ್ಲಿ ಅನೇಕ ದೊಡ್ಡ ಇನ್ನಿಂಗ್ಸ್'ಗಳನ್ನು ಆಡಿದ್ದಾರೆ. ಹೆಚ್ಚು ಸಮಯ ಏಕಾಗ್ರತೆ ಕಾಪಾಡಿಕೊಳ್ಳುವುದು ಅವರನ್ನು ನೋಡಿ ಕಲಿತಿದ್ದೇನೆ’ ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಕಳೆದ 17 ತಿಂಗಳಲ್ಲಿ 6 ದ್ವಿಶತಕ ಸಿಡಿಸಿದ್ದಾರೆ. ಅಲ್ಲದೆ ಒಟ್ಟಾರೆ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್'ನಲ್ಲಿ ಕೊಹ್ಲಿ 52 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.