ಈ ಪ್ರಶಸ್ತಿ ಗೆಲ್ಲುವ ಮೂಲಕ ಲಿಯಾಂಡರ್ ಪೇಸ್ ಪ್ರಸಕ್ತ ಋತುವಿನಲ್ಲಿ ಮೂರನೇ ಪ್ರಶಸ್ತಿ ಜಯಿಸಿದಂತಾಗಿದೆ.

ಇಲ್ಕ್ಲೇ(ಜೂ.25): ಭಾರತದ ಅನುಭವಿ ಟೆನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಮತ್ತು ಕೆನಡಾದ ಆದಿಲ್‌ ಶಂಸದ್ದೀನ್‌ ಜೋಡಿ ಏಗೋನ್‌ ಇಲ್‌'ಕ್ಲೇ ಚಾಲೆಂಜರ್‌ ಟ್ರೋಫಿಯ ಪುರುಷರ ಡಬಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಶನಿವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಪೇಸ್‌ ಜೋಡಿ 2-6, 6-2, 10-8 ಸೆಟ್‌'ಗಳಿಂದ ಸ್ಥಳೀಯ ಆಟಗಾರರಾದ ಬ್ರೇಡನ್‌ ಕ್ಲೆನ್‌ ಮತ್ತು ಜೋ ಸಲೀಸ್‌ಬರಿ ಜೋಡಿ ಎದುರು ಗೆಲುವು ಸಾಧಿಸಿದ್ದಾರೆ.

ಮೊದಲ ಸೆಟ್‌'ನಲ್ಲಿ 2 ಪಾಯಿಂಟ್ಸ್‌'ಗಳ ಹಿನ್ನಡೆ ಅನುಭವಿಸಿದ್ದ ಪೇಸ್‌ ಜೋಡಿ, ಎರಡನೇ ಸೆಟ್‌'ನಲ್ಲಿ 4 ಪಾಯಿಂಟ್‌'ಗಳಿಂದ ಮುನ್ನಡೆಯಿತು. 3ನೇ ಸೆಟ್‌'ನಲ್ಲಿ ಸ್ಥಳೀಯ ಜೋಡಿ ತೀವ್ರ ಪೈಪೋಟಿ ನೀಡಿದರೂ ಅಂತಿಮವಾಗಿ ಪೇಸ್‌ ಜೋಡಿ ಪಂದ್ಯ ಜಯಿಸಿತು. 

ಈ ಪ್ರಶಸ್ತಿ ಗೆಲ್ಲುವ ಮೂಲಕ ಲಿಯಾಂಡರ್ ಪೇಸ್ ಪ್ರಸಕ್ತ ಋತುವಿನಲ್ಲಿ ಮೂರನೇ ಪ್ರಶಸ್ತಿ ಜಯಿಸಿದಂತಾಗಿದೆ.