ನಾನು ಎಷ್ಟು ಅನುಭವಿ ಎನ್ನುವುದು ಮಾತ್ರ ಮುಖ್ಯವಲ್ಲ. ತಂಡ ಬಯಸಿದ್ದನ್ನು ನನ್ನಿಂದ ನೀಡಲು ಸಾಧ್ಯವಿಲ್ಲ ಎಂದಾದರೆ, ನಾನು ತಂಡದಲ್ಲಿದ್ದು ಯಾವುದೇ ಪ್ರಯೋಜನವಿಲ್ಲ.
ಕೊಲಂಬೊ(ಸೆ.01): ಶ್ರೀಲಂಕಾ ತಂಡದ ಅನುಭವಿ ವೇಗದ ಬೌಲರ್ ಲಸಿತ್ ಮಾಲಿಂಗಾ ಭಾರತ ವಿರುದ್ಧದ ಸರಣಿಯ ಬಳಿಕ ಕ್ರಿಕೆಟ್ ಭವಿಷ್ಯದ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
"ನಾನು ಕಾಲಿನ ಗಾಯದ ಸಮಸ್ಯೆಯಿಂದಾಗಿ ಸುಮಾರು 19 ತಿಂಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿದ್ದೇನೆ. ಜಿಂಬಾಬ್ವೆ ಹಾಗೂ ಭಾರತದ ವಿರುದ್ಧದ ಸರಣಿಯಲ್ಲಿ ನನ್ನಿಂದ ಅಷ್ಟೇನು ಉತ್ತಮ ಪ್ರದರ್ಶನ ಮೂಡಿಬಂದಿಲ್ಲ. ಈ ಸರಣಿಯ ಬಳಿಕ ನನ್ನ ದೇಹ ಕ್ರಿಕೆಟ್ ಆಡಲು ಎಷ್ಟು ಸ್ಪಂದಿಸುತ್ತದೆ ಎಂದು ಗಮನದಲ್ಲಿಟ್ಟು ಕ್ರಿಕೆಟ್ ಭವಿಷ್ಯದ ಬಗ್ಗೆ ಒಂದು ನಿರ್ಧಾರಕ್ಕೆ ಬರುತ್ತೇನೆ" ಎಂದು ಮಾಲಿಂಗಾ ತಿಳಿಸಿದ್ದಾರೆ.
"ನಾನು ಎಷ್ಟು ಅನುಭವಿ ಎನ್ನುವುದು ಮಾತ್ರ ಮುಖ್ಯವಲ್ಲ. ತಂಡ ಬಯಸಿದ್ದನ್ನು ನನ್ನಿಂದ ನೀಡಲು ಸಾಧ್ಯವಿಲ್ಲ ಎಂದಾದರೆ, ನಾನು ತಂಡದಲ್ಲಿದ್ದು ಯಾವುದೇ ಪ್ರಯೋಜನವಿಲ್ಲ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ನಾನು ಫಾರ್ಮ್'ಗೆ ಮರಳದಿದ್ದರೆ, ಸಂತೋಷದಿಂದಲೇ ನಿವೃತ್ತಿ ಹೊಂದುತ್ತೇನೆ" ಎಂದು ಯಾರ್ಕರ್ ಸ್ಪೆಷಲಿಸ್ಟ್ ಲಸಿತ್ ಮಾಲಿಂಗಾ ತಿಳಿಸಿದ್ದಾರೆ.
